ಮತ ಎಣಿಕೆ ಕೇಂದ್ರ: ರಾಜಕೀಯ ಮುಖಂಡರ ಎಂಟ್ರಿ -ಮೂಕ ಪ್ರೇಕ್ಷಕರಾದ ಅಧಿಕಾರಿಗಳು

ಮಸ್ಕಿ,ಡಿ.೩೧- ಮತ ಎಣಿಕೆ ಕೇಂದ್ರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಅಭ್ಯರ್ಥಿ ಅಥವಾ ಏಜೆಂಟ್ ಪ್ರವೇಶಕ್ಕೆ ಅವಕಾಶ ವಿದೆ ರಾಜಕೀಯ ಮುಖಂಡರು ಸೇರಿದಂತೆ ಬೇರೆ ಯಾರಿಗೂ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶ ವಿಲ್ಲ. ಇಲ್ಲಿಯ ದೇವನಾಂಪ್ರಿಯ ಸರಕಾರಿ ಪದವಿ ಕಾಲೇಜಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮುಖಂಡರು ಪ್ರತ್ಯಕ್ಷ ರಾಗಿದ್ದು ಕಂಡು ಮತ ಎಣಿಕೆ ಅಧಿಕಾರಿಗಳು ಕೆಲ ಹೊತ್ತು ದಂಗಾದರು.
ಪತ್ರಕರ್ತರ ಪ್ರವೇಶಕ್ಕೆ ನೂರೆಂಟು ನಿಯಮಗಳನ್ನು ಹೇಳುವ ಅಧಿಕಾರಿಗಳು ರಾಜಕೀಯ ಮುಖಂಡರಿಗೆ ಯಾವ ಮಾನದಂಡದ ಆಧಾರದ ಮೇಲೆ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶಕ್ಕೆ ಅನುಮತಿ ಕೊಟ್ಟರು ಎನ್ನುವುದು ತಿಳಿಯುತ್ತಿಲ್ಲ.
ಮೊದಲಿಗೆ ಕಾಂಗ್ರೆಸ್ ಮುಖಂಡರ ತಂಡ ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟಿತು ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡರು ಬಂದಿದ್ದಾರೆ ಎಂಬ ಸುದ್ದಿ ಕೇಳಿ ಬಿಜೆಪಿ ಮುಖಂಡರ ತಂಡ ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟಿತ್ತು. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಮತ ಎಣಿಕೆ ಕೇಂದ್ರದ ಕೊಠಡಿಗಳಿಗೆ ಪ್ರವೇಶ ಮಾಡಿ ಮತ ಎಣಿಕೆ ಪ್ರಕ್ರಿಯೆ ವೀಕ್ಷಿಸಿದರು ಪ್ರವೇಶ ಗೇಟ್ ಬಳಿ ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮುಖಾಮುಖಿ ಯಾದರು ಉಭಯ ಪಕ್ಷಗಳ ಮುಖಂಡರು ಪರಸ್ಪರ ಭೇಟಿ ಯಾಗಿ ಅಧಿಕಾರಿಗಳ ಜತೆ ನಿಂತು ಕೆಲ ಹೊತ್ತು ಚರ್ಚೆ ನಡೆಸಿದ ನಂತರ ಬಿಜೆಪಿ, ಕಾಂಗ್ರೆಸ್ ಮುಖಂಡರು ಜಾಗ ಖಾಲಿ ಮಾಡಿದರು ಕಂದಾಯ, ಪೊಲೀಸ್ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.

(೩೦,ಡಿ.ಎಂಎಸ್ಕೆ ಪೋಟೋ೦೨)