ಮತ ಎಣಿಕೆ ಕೇಂದ್ರ ತಯಾರಿ ನಡೆಸಿದ ಅಧಿಕಾರಿಗಳು

ಬೀದರ್: ಮೇ.11:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023 ರ ಮತದಾನವು ಮೇ. ನಿನ್ನೆ ಮುಗಿದಿದ್ದು. ಬೀದರ ಜಿಲ್ಲೆಯ ಎಲ್ಲಾ 6 ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ.71.54 ಪ್ರತಿಶತ ಮತದಾನವಾಗಿದ್ದು ಇದರ ಮತ ಎಣಿಕೆ ಕಾರ್ಯವು ಮೇ. 13 ರಂದು ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಭೂಮರೆಡ್ಡಿ (ಬಿ.ವಿ.ಬಿ )ಕಾಲೇಜಿಗೆ ಭೇಟಿ ನೀಡಿ ಮತ ಏಣಿಕೆ ಕೇಂದ್ರಗಳ ಪರಿಶೀಲನೆ ನಡೆಸಿದರು.