ಮತ ಎಣಿಕೆ ಕೇಂದ್ರದ ಎದುರು ನಿಂಬೆಹಣ್ಣು

ರಾಯಚೂರು.ಮೇ.೨.ಮಸ್ಕಿ ಉಪ ಚುನಾವಣೆಯ ಮತ ಎಣಿಕೆ ಕೇಂದ್ರದ ಮುಂದೆ ನಿಂಬೆಹಣ್ಣು ಹಾಕಿರುವ ಘಟನೆ ಇಂದು ನಡೆಯಿತು.
ಮಸ್ಕಿ ಉಪಚುನಾವಣೆಯ ಫಲಿತಾಂಶದ ಮತ ಎಣಿಕೆವು ಇಂದು ಬೆಳಿಗ್ಗೆಯಿಂದ ನಗರದ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ನಡೆಯುತ್ತಿದ್ದು ಮತ ಎಣಿಕಾ ಕೇಂದ್ರದ ದ್ವಾರದಲ್ಲಿ ದಿಢೀರ್ ನಿಂಬೆಹಣ್ಣು ಹಾಕಲಾಗಿದೆ. ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಪ್ರಾರಂಭವಾಗಿದ್ದು ಬೆಳಿಗ್ಗೆಯಿಂದ ಇರದ ನಿಂಬೆಹಣ್ಣು ಇವಗ ಹಾಕಿರುವುದರಿಂದ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.