ಮತ ಎಣಿಕೆಯನ್ನು ಎಚ್ಚರಿಕೆಯಿಂದ ನಿಭಾಯಿಸಿ-ಅನಿಲ್ ಕುಮಾರ್

ಸಂಡೂರು:ಡಿ.26: ಮತ ಎಣಿಕೆಯನ್ನು ಎಚ್ಚರಿಕೆಯಿಂದ ನಿಭಾಯಿಸಿ ಎಂದು ಚುನಾವಣಾ ತರಬೇತುದಾರ ಅನಿಲ್ ಕುಮಾರ್ ತಿಳಿಸಿದರು.
ಅವರು ಕಪ್ಪಲಕುಂಟೆ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.25 ರಂದು ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಾಸ್ಟರ್ ತರಬೇತುದಾರರು ತಮಗೆ ಕೊಟ್ಟಿರುವ ಕರ್ತವ್ಯವನ್ನು ಉದಾಸೀನ ಮಾಡದೆ ಜಾಗೃತ ವಹಿಸಿ ಎಚ್ಚರಿಕೆಯಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕಾಗಿದೆ. ಅಲ್ಲದೆ ಮತಗಳ ಎಣಿಕೆ ಸಮಯದಲ್ಲಿ ಎಚ್ಚರಿಕೆಯಿಂದ ನಿಭಾಯಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿದೆ. ತಮಗೆ ಹಂಚಿಕೆಯಾದ ಗ್ರಾಮ ಪಂಚಾಯ್ತಿ ಕ್ಷೇತ್ರ, ಹಂಚಿಕೆಯಾದ ಎಣಿಕೆ ಮಾಹಿತಿ, ಟೇಬಲ್ ಸಂಖೆಯನ್ನು ತಿಳಿದುಕೊಳ್ಳಿ. ಮತ ಎಣಿಕೆ ಮತ್ತು ಚುನಾವಣಾ ಅಭ್ಯರ್ಥಿಗಳ ಘೋಷಣೆ ಅತ್ಯಂತ ಗುರುತರವಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಹೆಚ್ಚಿನ ಗಮನ, ಉತ್ಸಾಹದೊಂದಿಗೆ ಸರಿಯಾದ ತಿಳುವಳಿಕೆ ಹೊಂದುವುದು ನಿಮ್ಮ ಕರ್ತವ್ಯ. ಚುನಾವಣಾ ಫಲಿತಾಂಶವು ತಪ್ಪಾದ, ಕ್ರಮಬದ್ದವಲ್ಲದ ನಿರ್ಲಕ್ಷದ ಎಣಿಕೆಯಿಂದಾಗಿ ಶೂನ್ಯ ಫಲಿತಾಂಶವಾಗಬಹುದು. ಈ ಎಲ್ಲ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ ಎಂದು ತರಬೇತುದಾರ ಅನಿಲ್ ಕುಮಾರ್ ಅವರು ತಿಳಿಸಿದರು. ಮತ ಎಣಿಕೆಯ ಮೇಲ್ವಿಚಾರಕರು, ಎಣಿಕೆ ಸಿಬ್ಬಂದಿ, ಆರ್.ಒ ರವರಿಗೆ ನಿಮ್ಮ ಸಹಕಾರ ಅಗತ್ಯ ಎಂದು ತಿಳಿಸಿ, ಜಿಲ್ಲಾಧಿಕಾರಿಗಳು ನೀಡಿದ ಪಾಸ್‍ಗಳನ್ನು ಗಮನಿಸಿ ಪತ್ರಕರ್ತರನ್ನು ಒಳಗಡೆ ಬಿಡಲು ಸೂಚಿಸಿದರು.