ಮತ್ತೊಮ್ಮೆ ಶಿವಾಜಿ.. ಮೋಡಿಗೆ ಸಜ್ಜು

* ಚಿ.ಗೋ ರಮೇಶ್

ನಟ ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಚಿತ್ರ ಬಿಡುಗಡೆಯಾಗಿದ್ದು ಮಾಡಿತ್ತು.ಇದೀಗ  ಶಿವಾಜಿ ಸುರತ್ಕಲ್-2 ಚಿತ್ರ ಸೆಟ್ಟೇರಿದೆ. ಮೊದಲ ಭಾಗದಲ್ಲಿ ಇದ್ದ ಕಲಾವಿದರ ಜೊತೆಗೆ ಈ ಬಾರಿ ಇನ್ನಿಬ್ಬರು ಹೊಸದಾಗಿ ಸೇರ್ಪಡೆಯಾಗಿದ್ದಾರೆ ಅದರಲ್ಲಿ ಒಬ್ಬರು ನಟಿ ಮೇಘನಾ ಗಾಂವ್ಕರ್.ಮತ್ತೊಬ್ಬರು ರಾಕೇಶ್ ಮಯ್ಯ.ಜೊತೆಗೆ ವಿನಾಯಕ ಜೋಷಿ ಕೂಡ.

ಕಳೆದ ವಾರ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರ ಕಲಾವಿದರು ತಂತ್ರಜ್ಞರು ಪಾಲ್ಗೊಂಡಿದ್ದರು.  ವಿನಾಯಕ ಜೋಷಿ. ಚಿತ್ರದಲ್ಲಿ ರಫ್ ಅ್ಯಂಡ್ ಟಫ್  ಪೋಲೀಸ್ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ  ತಿರುವು ನೀಡುವ ಪಾತ್ರವಾಗಿದೆ.  ಉದಯೋನ್ಮುಖ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಕುಲ್ ಅಭಯಂಕರ್ ಸಂಗೀತವಿದೆ.

ಶಿವಾಜಿ ಸುರತ್ಕಲ್-2 ಚಿತ್ರದ ಚಿತ್ರೀಕರಣ ಡಿಸಂಬರ್ ತಿಂಗಳಲ್ಲಿ ಶುರುವಾಗಲಿದ್ದು ಅದಕ್ಕೆ ಬೇಕಾದ ಸಿದ್ದತೆಗಳು ನಡೆಯುತ್ತಿವೆ.  ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದು.

ರಾಧಿಕ ನಾರಾಯಣ್ , ಮೇಘನ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಇವರೆಲ್ಲ ಈಗಾಗಲೆ ತಾರಾಗಣದಲ್ಲಿದ್ದು ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಕುತೂಹಲ ಹೆಚ್ಚಳ

ರಮೇಶ್ ಅರವಿಂದ್ ವಿಭಿನ್ನ ಪಾತ್ರದಲ್ಲಿ ಕಾಣಿಕೊಂಡಿದ್ದ ಶಿವಾಜಿ ಸೂರತ್ಕಲ್ ಯಶಸ್ವಿಯಾದ ಬೆನ್ನಲ್ಲೇ ನಿರ್ದೇಶಕ ಆಕಾಶ್ ಶ್ರಿವತ್ಸ ಮತ್ತು ನಿರ್ಮಾಪಕ ಅನೂಪ್ ಗೌಡ ಅವರು ಎರಡನೇ ಭಾಗದ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ಬಾರಿ ಹಳಬರೊಂದಿಗೆ ಹೊಸಬರೂ ಸೇರ್ಪಡೆಯಾಗಿದ್ದಾರೆ.ಹೀಗಾಗಿ ಮತ್ತಷ್ಟು ಕುತೂಹಲ ಕೆರಳಿಸಿದೆ.