ಮತ್ತೊಮ್ಮೆ ಮೋದಿ ಸರ್ಕಾರ ಅಭಿಯಾನಕ್ಕೆ ಚಾಲನೆ

ಬೀದರ್: ಜ.17:ರಾಜ್ಯದಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಮತ್ತೊಮ್ಮೆ ಮೋದಿ ಸರ್ಕಾರ’ ಅಭಿಯಾನಕ್ಕೆ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ತಾಲ್ಲೂಕಿನ ಚಿಟ್ಟಾ ವಾಡಿ ಗ್ರಾಮದಲ್ಲಿ ಗೋಡೆ ಮೇಲೆ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂದು ಬರೆದು ಅಭಿಯಾನಕ್ಕೆ ಚಾಲನೆ ನೀಡಿದರು.

‘2024ರಲ್ಲಿ ಪುನಃ ಮೋದಿಯವರು ದೇಶದಲ್ಲಿ ಸರ್ಕಾರ ರಚಿಸಬೇಕು. ಭಾರತಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ. ಪ್ರತಿ ಬೂತ್‍ನಲ್ಲಿ ಐದು ಕಡೆ ಗೋಡೆ ಬರಹ ಬರೆಯಬೇಕು. ಇದು ಮೋದಿಯವರ ಅಪೇಕ್ಷೆಯಾಗಿದೆ. ಕಾರ್ಯಕರ್ತರು ಅದರಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬೆಲ್ದಾಳೆ ಹೇಳಿದರು.

‘ರಾಷ್ಟ್ರಮಟ್ಟದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗೋಡೆ ಬರಹ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಭಾರತ ವಿಕಾಸ ಹೊಂದುತ್ತಿದೆ. ಕೇಂದ್ರದ ಅನೇಕ ಯೋಜನೆಗಳು ಜನಸಾಮಾನ್ಯರಿಗೆ ತಲುಪಿವೆ. ಆದಕಾರಣ ಪುನಃ ಮೋದಿ ದೇಶದ ಪ್ರಧಾನಿ ಹುದ್ದೆಗೇರಬೇಕು’ ಎಂದರು.

ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌರಶೆಟ್ಟಿ, ಪ್ರಮುಖರಾದ ಚಂದ್ರಯ್ಯ ಸ್ವಾಮಿ, ಶಿವಾಜಿ ಪಾಟೀಲ, ಜಗನ್ನಾಥ ಪಾಟೀಲ, ಶಶಿಧರ ಹೊಸಳ್ಳಿ, ಉದಯಕುಮಾರ ತೋರಣ, ವಿಜಯಕುಮಾರ ಪಾಟೀಲ, ಮಲ್ಲಿಕಾರ್ಜುನ ಚಿಟ್ಟಾ, ಗುರುನಾಥ ರಾಜಗೀರಾ, ಪ್ರಶಾಂತ ಸಿಂದೋಲ, ಕೈಲಾಶನಾಥ ಕಾಜಿ, ಶಿವಕುಮಾರ ಪಾಟೀಲ, ಆನಂದ ಪಾಟೀಲ, ಶಿವಕಾಂತ ಶೇಕಾಪುರ, ವೀರೇಶ ಸ್ವಾಮಿ, ವೈಜಿನಾಥ ಚಿಟ್ಟಾವಾಡಿ, ಸಂಜು ಮದರಗಿ, ರಮೇಶ ಡಿ.ಜೆ., ರಮೇಶ ಬೋರಗಿ, ವೈಜಿನಾಥ ಚಿಟ್ಟಾ, ಶರಣು ಸ್ವಾಮಿ, ಪುಟ್ಟು ಸುತಾರ, ಬಂಡೆಪ್ಪ, ಪಂಡರಿ, ರಾಗು ರೆಡ್ಡಿ, ನಾಗೇಶ ಪಾಂಚಾಳ, ನಂದಕುಮಾರ, ಆಕಾಶ, ಅನೀನ ಪಾಟೀಲ ಹಾಜರಿದ್ದರು.