ಮತ್ತೊಮ್ಮೆ ಮೋದಿ ಜಾಗೃತಿ ಅಭಿಯಾನ:ಬೈಕ್ ಱ್ಯಾಲಿ


 ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.05: ಸಧೃಡ ರಾಷ್ಟ್ರ ನಿರ್ಮಾಣಕ್ಕಾಗಿ ಮಾತ ರಾಜಲಕ್ಷ್ಮೀ ಅಮ್ಮನವರು ರಾಷ್ಟ್ರಾದ್ಯಂತ ಬೈಕ್ ಱ್ಯಾಲಿ ಮೂಲಕ ಮತ್ತೊಮ್ಮೆ ಮೋದಿ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಖಜಾಂಚಿ ಸಿದ್ದಾರ್ಥ ಸಿಂಗ್ ಹೇಳಿದರು.
ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆ, ಮತ್ತೊಮ್ಮೆ ಮೋದಿ ಜಾಗೃತಿ ಯಾತ್ರೆ ಹಾಗೂ ಮಹಿಳಾ ಮೋರ್ಚಾದಿಂದ ಮಾತೃವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ನಮೋ ಅಭಿಯಾನ ಶುರುವಾಗಿದ್ದು, 2024ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಬೈಕ್ ಮೂಲಕ ನಾಡಿನಾದ್ಯಂತ ಸಂಚಾರ ಮಾಡಿ ಯುವಕರಿಗೆ ಸ್ಪೂರ್ತಿ ತುಂಬುತ್ತಿರುವ ರಾಜಲಕ್ಷ್ಮಿ ಅಮ್ಮನವರು ಮಾದರಿಯಾಗಿದ್ದಾರೆ. ಕೇಂದ್ರ ಸರ್ಕಾರ ಯೋಜನೆಗಳು ಜನಪರವಾಗಿದ್ದು, ಈಗಾಗಲೆ ಜನರ ಮೆಚ್ಚುಗೆ ಪಡೆದಿವೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆ ಆದರು ಅವರನ್ನು ಗೆಲ್ಲಿಸುವ ಕೆಲಸವನ್ನು ನಾವುಗಳು ಮಾಡುತ್ತೇವೆ.
ಯುವಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ್ರೋಹಕ್ಕೆ ಕುಮ್ಮಕ್ಕು ನೀಡುತ್ತಿದ್ದು, ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ. ಸಮಾಜದಲ್ಲಿ ದೇಶಭಿಮಾನ ಮೂಡಲು ಬಿಜೆಪಿ ಯುವ ಮೋರ್ಚಾ ಇಂದು ರಾಜ್ಯಾದ್ಯಂತ ತಿರಂಗ ಯಾತ್ರೆಯನ್ನು ಹಮ್ಮಿಕೊಂಡಿದೆ. ವಿಶ್ವಕ್ಕೆ ಸನಾತನ ಸಂಸ್ಕೃತಿ ಕೊಟ್ಟ ದೇಶ ಭಾರತ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಭಾರತ ವಿಶ್ವಗುರು ಆಗುವುದರಲ್ಲಿ ಅನುಮಾನ ಇಲ್ಲ ಎಂದರು.
 ಜಾಗೃತಿ ಅಭಿಯಾನದ ಮುಖ್ಯಸ್ಥೆ ಮಾ ರಾಜಲಕ್ಷ್ಮಿ ಮಾತನಾಡಿ, ರಾಷ್ಟ್ರ ಕಂಡಂತ ಅತ್ಯುತ್ತಮ ನಾಯಕ ಮೋದಿ. ಅಂತವರ ಪರವಾಗಿ ಈಗಾಗಲೆ 1 ಲಕ್ಷ ಕಿ.ಮೀ. ಬೈಕ್ ನಲ್ಲಿ ಜನಜಾಗೃತಿ ಅಭಿಯಾನ ಮಾಡಿರುವುದು ಖುಷಿ ತಂದಿದೆ. ವಿಜಯನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಮಾತೃವಂದನ, ತಿರಂಗ ಯಾತ್ರೆಯನ್ನು ಯಶಸ್ವಿ ಮಾಡಿಕೊಟ್ಟಿದ್ದಾರೆ. ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹು ಮುಖ್ಯವಾದುದ್ದು, ಮತ್ತೊಮ್ಮೆ ಮೋದಿ ಸರ್ಕಾರ ಬರಲು ಎಲ್ಲರು ಶ್ರಮಿಸಬೇಕು ಎಂದರು. ಜಿಲ್ಲಾ ಉಪಾಧ್ಯಕ್ಷೆ ಭಾರತಿ, ಎಸ್ಟಿ ಮೋರ್ಚಾ ಅಧ್ಯಕ್ಷ ಜಗದೀಶ್ ಕಮಟಗಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣ,  ಮಂಡಲ ಅಧ್ಯಕ್ಷ ಶಂಕರ್ ಮೇಟಿ, ನಗರ ಘಟಕ ಅಧ್ಯಕ್ಷ ರೇವಣಸಿದ್ದಪ್ಪ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರೀಕಾಂತ ಪೂಜಾರ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಸೂರಿ ಬಂಗಾರು, ಬಿಜೆ ಕವಿತಾ, ರೇಖಾರಾಣಿ, ಸಂಧ್ಯ, ರೇಣುಕಾ, ಉಮಾ, ಚಂದ್ರು ದೇವಲಾಪುರ, ಆರ್.ನಾಗರಾಜ್, ಹುನ್ನೂರಪ್ಪ, ರಾಘವೇಂದ್ರ, ಪ್ರಮೋದ್, ಅಭಿಶೇಕ್, ಪುನೀತ್, ಮಹಾಲಕ್ಷ್ಮಿ, ಕೊಲ್ಲಾಪುರಿ ಇತರರಿದ್ದರು.