ಮತ್ತೊಮ್ಮೆ ಮೋದಿ ಘೋಷಣೆಯಬಿಜೆಪಿ ಪಾದಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ನಗರದಲ್ಲಿಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಪಕ್ಷದ ಧ್ವಜವನ್ನಿಡಿದು ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು.
ನಗರದ ಗಡಗಿ ಚೆನ್ನಪ್ಪ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ, ಗವಿಯಪ್ಪ ವೃತ್ತ, ಅಂಬೇಡ್ಕರ್ ವೃಥತ, ಕುಟ್ಟಿ ಸರ್ಕಲ್, ದೇವಿನಗರ, ಎಸ್ಪಿ ಸರ್ಕಲ್ ಮೂಲಕ ಸಾಗಿಬಂತು.
ಸುಡುವ ಬಿಸಿನಲ್ಲಿ ಬೆವರು ಸುರಿಸುತ್ತ ಮುಖಂಡರು, ಅದರಲ್ಲೂ ಮಹಿಳಾ ಕಾರ್ಯಕರ್ತರು ಸಾಗಿದ್ದು ಪಕ್ಷದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿತು.
ಪಾದಯಾತ್ರೆಯುದ್ದಕ್ಕೂ ಮೋದಿಗೆ ಜಯಕಾರ ಹಾಕಲಾಯ್ತು. ಚುನಾವಣಾ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪನಾ ದಿನವನ್ನು ಪಕ್ಷದ ಪ್ರಚಾರಕ್ಕೆ ಸಕಸರಾತ್ಮಕವಾಗಿ ಬಳಸಿಕೊಳ್ಳಲಾಯ್ತು.

One attachment • Scanned by Gmail