ಮತ್ತೊಮ್ಮೆ ಬಳ್ಳಾರಿ‌ಪಾಲಿಕೆ ಮೇಲೆ ಬಿಜೆಪಿ ಧ್ವಜ

ಬಳ್ಳಾರಿ ಏ 01 : ಕಳೆದ 2001, 2007 ರಂತೆ ಮತ್ತೊಮ್ಮೆ ಇಲ್ಲಿನ‌ ಮಹಾನಗರ ಪಾಲಿಕೆಯ‌ಮೇಲೆ ಮತ್ತೊಮ್ಮೆ ಬಿಜೆಪಿಯ ಅಭಿವೃದ್ಧಿ ಧ್ವಜ ಹಾರಲಿದೆ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರಿಂದು ಪಾಲಿಕೆ ಚುನಾವಣೆಯ ಪ್ರಕ್ರಿಯೆಗಳಿಗೆ ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ, ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮೂರ್ತಿ ಅವರು ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಈಗಾಗಲೇ ನಗರದ 28 ವಾರ್ಡಗಳಲ್ಲಿ ಸುತ್ತಾಡಿ ಯಾರನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಜನಾಭಿಪ್ರಾಯ ತೆಗೆದುಕೊಂಡಿದೆ. ಕೌಲ್ ಬಜಾರ್ ನಲ್ಲಿ ಹೋಗಬೇಕಿದೆ.
ಬಿಜೆಪಿಗೆ ಓಟು ಹಾಕಿದರೆ ಅಭಿವೃದ್ಧಿ ಎಂದು ಜನರು ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ‌ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.

ಪಾಲಿಕೆಯ 39 ವಾರ್ಡುಗಳ ಪೈಕಿ 30 ರಿಂದ 33 ವಾರ್ಡ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧ್ಯ ಎಂದರು.

ಪಕ್ಷದ ಗೆಲುವೇ ನಮ್ಮ‌ಗುರಿ.
ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ವೈಮನಸ್ಸು, ಜಿಲ್ಲೆ ವಿಭಜನೆ ವಿಷಯ ಪ್ರಭಾವ ಬೀರದು ಎಂದ ಅವರು.
ಶ್ರೀರಾಮುಲೇ ನಮಗೆ ಉಸ್ತುವಾರಿ ಸಚಿವರಿದ್ದ ಹಾಗೆ ಎಂದರು.

ಪಕ್ಷದ ಸಹ ಪ್ರಭಾರಿ ವಿರುಪಾಕ್ಷಪ್ಪ. ವಿಭಾಗದ ಪ್ರಭಾರಿ ಸಿದ್ದೇಶ್ ಯಾದವ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಹನುಮಂತಪ್ಪ, ಮಾಜಿ ಸಂಸದೆ ಶಾಂತ, ಕೌಲ್ ಬಜಾರ್ ಅಧ್ಯಕ್ಷ ಗೌಳಿ ಶಂಕ್ರಪ್ಪ, ನಗರ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್,
ನೂರ್ ಭಾಷಾ, ಕೆ.ಎ.ರಾಮಲಿಂಗಪ್ಪ. ಪ್ರಭುಕಪ್ಪಗಲ್ಲು, ಅನಿಲ್ ನಾಯ್ಡು, ಶ್ರೀನಿವಾಸ್ ಮೋತ್ಕರ್, ಮುರಾರಿಗೌಡ, ಡಾ.ಅರುಣಾ ಕಾಮಿನೇನಿ, ಮಾಜಿ ಉಪ ಮೇಯರ್ ಶಶಿಕಲಸಂಜಯ್ ಬೆಟಗೇರಿ ಮೊದಲಾದವರು ಇದ್ದರು.

2001 ರಲ್ಲಿ 18 ಗೆದ್ದು ಜೆಡಿಎಸ್ ಬೆಂಬಲದೊಂದಿಗೆ

ನಂತರ 2007 ರಲ್ಲಿ
30 ವಾರ್ಡ್ ಗಳಲ್ಲಿ ಗೆದ್ದಿತ್ತು.
ಕಾಂಗ್ರೆಸ್ 0 ಇತ್ತು. ಬಿಎಸ್ಪಿ ಎರೆಡು ಮತ್ತು ಮೂರು ಪಕ್ಷೇತರ ಅಭ್ಯರ್ಥಿಗಳು ಇದ್ದರು.