ಮತ್ತೊಮ್ಮೆ ದೃಶ್ಯ…

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹಿರಿಯ ನಿರ್ದೇಶಕ ಪಿ.ವಾಸು ಕಾಂಬಿನೇಷನ್‍ನಲ್ಲಿ ತೆರೆಗೆ ಬಂದು ಯಶಸ್ವಿಯಾಗಿದ್ದ “ದೃಶ್ಯ” ಚಿತ್ರ ಇದೀಗ ಅದರ ಮುಂದುವರಿದ ಭಾಗ “ದೃಶ್ಯ-2” ಬರಲಿದೆ.ಈ ಜೋಡಿ ಮತ್ತೊಮ್ಮೆ ಒಂದಾಗಿದೆ.

ಬಹುಬೇಕ ಮೊದಲ ಭಾಗದಲ್ಲಿ ಇದ್ದವರೇ ಈ ಭಾಗದಲ್ಲಿ ಇರಲಿದ್ದು ಒಂದಿಬ್ಬರು ಹೊಸಬರು ಸೇರ್ಪಡೆಯಾಗಲಿದ್ದಾರೆ.

ಇತ್ತೀಚೆಗೆ ಮೋಹನ್ ಲಾಲ್ ಅಭಿನಯದಲ್ಲಿ ಮಲೆಯಾಳಂನಲ್ಲಿ “ದೃಶಂ-2” ಚಿತ್ರ ತೆರೆಗೆ ಬಂದು ಬಾರಿ ಯಶಸ್ಸು ಗಳಿಸಿತ್ತು. ಅದೇ ಖುಷಿ ಮತ್ತು ಹುಮ್ಮಸ್ಸಿನಲ್ಲಿ ಕನ್ನಡದಲ್ಲಿಯೂ ಎರಡನೇ ಭಾಗ ಬರಲು ಸಜ್ಜಾಗಿದೆ. ಈ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ರಾಜೇಂದ್ರ ಪೊನ್ನಪ್ಪನ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಲು ಸಿದ್ದರಾಗಿದ್ದಾರೆ. ಈ ಬಾರಿ ಮತ್ತಷ್ಟು ಕುತೂಹಲದೊಂದಿಗೆ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ಪಿ. ವಾಸು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.

ದೃಶ್ಯ ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಪಾತ್ರಗಳು, ನಟರು ದೃಶ್ಯ-2 ಚಿತ್ರದಲ್ಲಿ ಮುಂದುವರೆಯಲಿದ್ದಾರೆ. ಇದರ ಜೊತೆ ಹೆಚ್ಚುವರಿ ಪಾತ್ರಗಳು ಸಹ ಸೇರಿಕೊಳ್ಳಲಿವೆ. ನವ್ಯನಾಯರ್, ಆರೋಹಿ ನಾರಾಯಣ್ ,ಪ್ರಭು, ಆಶಾಶರತ್ ಮತ್ತು ಉನ್ನತಿ ಜೊತೆಗೆ ನಟ ಪ್ರಮೋದ್ ಶೆಟ್ಟಿ ಚಿತ್ರತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

ಜಿ.ಎಸ್.ವಿ.ಸೀತಾರಾ ಕ್ಯಾಮರಾವರ್ಕ್ ನಿರ್ವಹಿಸಲಿದ್ದು, ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ಈ ಚಿತ್ರವನ್ನು ಮುಖೇಶ್ ಆರ್. ಮೆಹ್ತಾ ಮತ್ತು ಸಿ.ವಿ.ಸಾರಥಿ ಸೇರಿ ನಿರ್ಮಿಸಲಿದ್ದಾರೆ. ಮೇ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

ಈಗಾಗಲೇ ತೆಲುಗಿಗೂ ರೀಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಮಲಯಾಳಂನಲ್ಲಿ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.