ಮತ್ತೊಮ್ಮೆ ಜನರು ಆಶೀರ್ವದಿಸುವ ವಿಶ್ವಾಸ ವಿದೆ : ಎನ್ ಎ ಹ್ಯಾರೀಸ್

ಬೆಂಗಳೂರು,ಮೇ.೫: ಶಾಸಕನಾಗಿದ್ದ ವೇಳೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ನನ್ನ ಅಭಿವೃದ್ಧಿ ಕೆಲಸ ನೋಡಿ ಕ್ಷೇತ್ರದ ಜನರು ಈ ಬಾರಿಯೂ ನನಗೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ , ಶಾಸಕ ಎನ್. ಎಂ.ಹ್ಯಾರೀಸ್ ರವರು ತಿಳಿಸಿದರು.
ಶಾಂತಿನಗರ ಕ್ಷೇತ್ರದ ವಿವಿಧ ಕಡೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ವನ್ನಾರ ಪೇಟೆ ವಾರ್ಡ್‌ನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು ನಿಂತಿದೆ. ವಾರ್ಡ್‌ನಲ್ಲಿ ಸುಮಾರು ೨೦೦ ಹೊಸ ಮನೆಗಳ ನಿರ್ಮಾಣ, ಕೋವಿಡ್ ಸಮಯದಲ್ಲಿ ಮೆಡಿಕಲ್ ಕಿಟ್, ಬೆಡ್ ಗಳ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ಸಹಾಯ ಮಾಡಲಾಗಿದೆ ಎಂದರು,.
ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಶಾಂತಿನಗರ ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು ಪಾಲಿಕೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ತಿಳಿಸಿದರು.
ಎನ್. ಎ. ಹಾರೀಸ್ ರವರು ಪ್ರಚಾರ ಮಾಡುವ ವೇಳೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದ್ದು ಎಲ್ಲೆಡೆ ಕಂಡು ಬಂದಿತು. ಪ್ರಚಾರದ ವೇಳೆ ಹಲವಾರು ಕಾಂಗ್ರೆಸ್ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಎ. ಹ್ಯಾರೀಸ್‌ನವರು ಕ್ಷೇತ್ರದ ವಿವಿಧ ಕಡೆ ಮತಯಾಚನೆ ಮಾಡುವ ವೇಳೆ ಮಹಿಳೆಯರು ಆರತಿ ಬೆಳಗಿದರು. ಪಕ್ಷದ ಹಲವಾರು ಮುಖಂಡರು, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.