ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ : ರಕ್ಷರಾಮಯ್ಯ

ಹೊಸಪೇಟೆ ಮಾ21: ರಾಜ್ಯದ ಮುಂಬರುವ ಚುನಾವಣೆಗಳಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಸರ್ಕಾರ ರಚನೆಗೆ ಕಾರ್ಯಕರ್ತರು ಈಗಿನಿಂದಲೇ ಸಿದ್ದತೆಯಲ್ಲಿ ಎಂದು ಯುವ ಕಾಂಗ್ರೇಸ್ ರಾಜ್ಯಾಧ್ಯಕ್ಷ ರಕ್ಷರಾಮಯ್ಯ ಹೇಳಿದರು.
ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವಿಜಯನಗರ ಜಿಲ್ಲಾ ಮಟ್ಟದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕಿತ್ತೊಗೆದು ಮತ್ತೆ ಕಾಂಗ್ರೇಸ್ ಸರ್ಕಾರ ರಚನೆಯಾಗಬೇಕಿದೆ ಅದಕ್ಕಾಗಿ ಕಾರ್ಯಕರ್ತರು ಸಿದ್ದತೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ರೈತ, ಮಹಿಳಾ, ಕಾರ್ಮಿಕ ಹಾಗೂ ಬಡವರ್ಗದ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ತೊಲಗಿಸಲು ಇಂದಿನಿಂದಲೇ ಪೂರ್ವ ಸಿದ್ದತೆಗಳನ್ನು ಆರಮಭಿಸಬೇಕು ಎಂದರು.
ದಬ್ಬಾಳಿಕೆ:
ಜಿಪಂ ಸದಸ್ಯ ನಾರಾ ಭರತ್ ರೆಡ್ಡಿ ಮಾತನಾಡಿ, ಇನ್ನೂ ಎರಡೇ ವರ್ಷದಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. “ರಾಜ್ಯದಲ್ಲಿ ಬಿಜೆಪಿಯವರ ದಬ್ಬಾಳಿಕೆ ಹೆಚ್ಚಾಗಿದೆ. ಜನರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ವಿಜಯನಗರ, ಬಳ್ಳಾರಿ ಎಲ್ಲಾ ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆಗ ನೀವೂ ಏನು ಮಾಡ್ತಿರಿ ನಾವು ನೋಡ್ತೆವೆ’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ಸಿಗದ ಬೈಕ್ ರ್ಯಾಲಿ:
ಇಂದು ಕಾಂಗ್ರೆಸ್ ಕಾರ್ಯಕರ್ತರ ಬೈಕ್ ರ್ಯಾಲಿ ತಡೆಯಬಹುದು. ಆದರೆ, ನಮ್ಮ ಸರ್ಕಾರ ಬಂದಾಗ ನಾವು ನಿಮಗೆ ರ್ಯಾಲಿಗೆ ಅನುಮತಿ ಕೊಡ್ತಿವಿ. ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ, ಹೊಸಪೇಟೆಗೆ ಬಂದಿದ್ರು, ಈಗ ರಕ್ಷರಾಮಯ್ಯನವರು ಹೊಸಪೇಟೆಗೆ ಬಂದಿದ್ದಾರೆ. 2023ರಲ್ಲಿ ಕಾಂಗ್ರೆಸ್‍ನ ಶಾಸಕರೇ ಇಲ್ಲಿ ಆಯ್ಕೆ ಆಗಿರುತ್ತಾರೆ’’ ಎಂದರು.
“ಕರ್ನಾಟಕವನ್ನು ಬ್ರಾಹ್ಮಣ ರಾಜ್ಯ ಮಾಡಲು ಹೊರಟಿದ್ದಿರಿ, ಅದು ಅಸಾಧ್ಯ, ಇದು ಅಂಬೇಡ್ಕರ್ ರಾಜ್ಯ. ಬಿಜೆಪಿ ಬ್ರಾಹ್ಮಣರ ಜನತಾ ಪಾರ್ಟಿ. ಎಸ್ಸಿ,ಎಸ್ಟಿ, ಹಿಂದುಳಿದ ಹಾಗೂ ಶೋಷಿತ ಮತ್ತು ಮುಸ್ಲಿಂ ವರ್ಗದವರ ಧ್ವನಿ ಅಡಗಿಸುವ ಕಾರ್ಯ ಮಾಡಲಾಗುತ್ತಿದೆ’’ ಎಂದು ಭರತ್‍ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಗುಜ್ಜಲ ನಾಗರಾಜ್ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಯ ಹತ್ತು ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್‍ನ ಕಾರ್ಯಕರ್ತರು ಪಕ್ಷ ಗೆಲ್ಲಿಸಲಿದ್ದಾರೆ ಎಂದರು. ಯುವ ಮುಖಂಡ ಪಿ.ಟಿ. ಭರತ್‍ನಾಯ್ಕ, ಯುವ ಕಾಂಗ್ರೆಸ್‍ನ ರಾಜ್ಯ ಉಪಾಧ್ಯಕ್ಷೆ ಭವ್ಯಾ, ಮುಖಂಡರಾದ ಇಬ್ರಾಹಿಂ, ಗುಜ್ಜಲ ರಘು, ಹಕೀಂ, ಸಿದ್ದು, ಖಾನ್, ಭರತ್‍ಕುಮಾರ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.