
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಸಂಗೀತ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ. ವಾಣಿ ಹರಿಕೃಷ್ಣ, ಚೈತ್ರಾ, ಡಾ.ಶಮಿತಾ ಮಲ್ನಾಡ್. ಸಿ.ಆರ್ ಬಾಬಿ ಇದೀಗ ಆ ಸಾಲಿಗೆ ಮಾನಸ ಹೊಳ್ಳ ಸೇರ್ಪಡೆಯಾಗಿದೆ.
ಹಿರಿಯ ಕಲಾವಿದ ಶಂಖನಾದ ಅರವಿಂದ್ ಪುತ್ರಿ ಮಾನಸ ಹೊಳ್ಳ ಗಾಯನ, ಸಂಗೀತ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ.
ಬಯಲು ಸೀಮೆ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಗಮನ ಸೆಳೆದಿದ್ದಾರೆ. ಅಪ್ಪಟ ಉತ್ತರ ಕರ್ನಾಟಕದ ಘಮಲು ಹೊಂದಿರುವ ಬಯಲು ಸೀಮೆ ಚಿತ್ರ ಸಂಗೀತದಿಂದಲೇ ಗಮನ ಸೆಳೆಯುತ್ತಿದೆ.
ಇದುವರೆಗೂ 6 ಟು 6, ಕನಸು ಮಾರಾಟಕ್ಕಿದೆ, ಮನಸಾಗಿದೆ, ಮಸಣದ ಹೂ ಸೇರಿ 6 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅದರಲ್ಲಿಯೂ ಕನಸು ಮಾರಾಟಕ್ಕಿದೆ ಚಿತ್ರದ ಸಂಗೀತ ನಿರ್ದೇಶನಕ್ಕೆ ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಮಾನಸ ಹೊಳ್ಳ ಗಾಯಕಿಯಾಗಿ ಸುಮಾರು 400ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಅಧ್ಯಕ್ಷ ಚಿತ್ರದ ಕಣ್ಣಿಗೂ ಕಣ್ಣಿಗೂ, 99, ಧಮಾಕಾ ಸೇರಿದಂತೆ ಸಾಕಷ್ಟು ಹಿಟ್ ಹಾಡಿದ ಕೀರ್ತಿಗೂ ಭಾಜನರಾಗಿದ್ದಾರೆ,.ತಾಯಿ ಹಾಡುಗಾರ್ತಿಯಾಗಿದ್ದ ಹಿನ್ನೆಲೆಯಲ್ಲಿ ಮಾನಸ ಅವರಿಗೆ ಚಿಕ್ಕ ವಯಸಿನಿಂದಲೇ ಸಂಗೀತದ ಮೇಲೆ ಹೆಚ್ಚಿನ ಆಸಕ್ತಿ ಮೂಡಲು ಕಾರಣವಾಗಿದೆ.
ವಿದೇಶಗಳಲ್ಲಿಯೂ ಕೀರ್ತಿ
ಆಲ್ಬಂಗಳು ಟಿವಿ ಸೀರಿಯಲ್ ಗಳಿಗೂ ಕೆಲಸ ಮಾಡಿರುವ ಮಾನಸ ಹೊಳ್ಳ ವಿದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನಾಡಿನ ಹಿರಿಮೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹಾರಿಸಿದ್ದಾರೆ. ಭವಿಷ್ಯದಲ್ಲಿ ಹಾಡುಗಾರಿಗೆ ಸಂಗೀತ ಎರಡಲ್ಲಿಯೂ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ.