ಮತ್ತೊಬ್ಬರ ಶ್ರೇಯಸ್ಸು, ಶ್ರಮದ ಫಲ ಕಸಿದು ತಿನ್ನುವ ಕೆಟ್ಟ ಸಂಸ್ಕøತಿ ಕಾಂಗ್ರೆಸ್ ಪಕ್ಷದ್ದು

ಬೀದರ:ಫೆ.20:ಸಂವಿಧಾನ ಕಲಂ 371 (ಜೆ) ತಿದ್ದುಪಡಿಯ ರೂವಾರಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದಿಂದ ಎಸ್.ಎಂ.ಕೃಷ್ಣ ಕೇಂದ್ರಕ್ಕೆ ಪ್ರಸ್ಥಾವನೆಯನ್ನು ಕಳುಹಿಸಿಕೊಟ್ಟಿದ್ದರು ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇಂದಿಗೂ ರಾಜ್ಯದ ಜನ, ಕಲ್ಯಾಣ ಕರ್ನಾಟಕದ ಪಿತಾಮಹ, 371 (ಜೆ) ರೂವಾರಿ ಎಂದು ದಿ. ವೈಜಿನಾಥ ಪಾಟೀಲ್ ರವರಿಗೆ ಮಾತ್ರ ಕರೆಯುತ್ತಾರೆ, 371 (ಜೆ) ಕಲಂ ತಿದ್ದುಪಡಿಯಲ್ಲಿ ದಿ.ವೈಜಿನಾಥ ಪಾಟೀಲ್ ಸೇರಿದಂತೆ ಲಕ್ಷಾಂತರ ಜನರ ಶ್ರಮವಿದೆ, ನೋವಿದೆ, ಕೆಟ್ಟ ಅನುಭವಗಳಿವೆ, ಅವಮಾನಗಳಿವೆ, ಇದೇಲ್ಲದರ ಜೊತೆಗೆ ಕಾಂಗ್ರೇಸ್ಸಿಗರ ಲೇವಡಿ ಮಾತುಗಳಿವೆ, ಇದನ್ನು ಮುಚ್ಚಿಡಲು ಕಾಂಗ್ರೇಸ್ ದಿನಕ್ಕೊಂದು ನಾಟಕ ಮಾಡುತ್ತಿದೆ.
ಧೃತರಾಷ್ಟ್ರನಂತೆ, ಈಶ್ವರ ಖಂಡ್ರೆಯವರಿಗೆ, ತನ್ನ ಪುತ್ರ ಹಾಗೂ ಪರಿವಾರದವರ ಮೇಲೆ ಇರುವ ಅತಿ ವ್ಯಾಮೋಹದ ಕಾರಣ, ತನ್ನ ಆಸೆ ಇಡೆರಿಸಿಕೊಳ್ಳಲು ಮಾನ್ಯ ಮಲ್ಲಿಕಾರ್ಜುನ ಖರ್ಗೆಜಿಯವರಿಗೆ ಅಭಿನಂದನಾ ಸಮಾರಂಭ ಇಟ್ಟುಕೊಂಡು, ತನ್ನ ಬೇಳೆ ಬೆಯಿಸಿಕೊಳ್ಳಲು ಹೊರಟಿದ್ದಾರೆ, ಕಾಂಗ್ರೇಸ್ ನವರಿಗೆ ಕೇವಲ ಕುಟುಂಬವೇ ಮುಖ್ಯ ಎಂಬುದು ಈ ಕಾರ್ಯಕ್ರಮದಿಂದ ಮತ್ತೊಮ್ಮೆ ಸಾಬಿತಾಗುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
371 (ಜೆ) ಶ್ರೇಯವನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ರವರಿಗೆ ನೀಡುತ್ತಿರುವ ಈಶ್ವರ ಖಂಡ್ರೆಯವರಿಗೆ ಮತಿಭ್ರಮಣೆಯಾಗಿದೆ, ರಾಜ್ಯ ಸರ್ಕಾರಗಳು  371 ಕಲಂ ತಿದ್ದುಪಡಿ ಮಾಡಲು ಮನಸ್ಸು ತೊರದೆ ಇದ್ದಾಗ, 2001 ರಿಂದ 2004ರವರೆಗೆ ವೈಜಿನಾಥ ಪಾಟೀಲ್‍ರವರು ಪ್ರತ್ಯೆಕ ರಾಜ್ಯದ ಹೊರಾಟ ಪ್ರಾರಂಭಿಸಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು, ಇದಕ್ಕೆ ಹೆದರಿ, ಅಂದಿನ ಸಿ.ಎಮ್. ಎಸ್.ಎಮ್. ಕೃಷ್ಣಾರವರು 371 ಕಲಂ ತಿದ್ದುಪಡಿ ಮಾಡಲು ನಾವು ನಿಮಗೆ ಸಹಕಾರ ನೀಡುತ್ತೇವೆ, ನಿವು ನಿಮ್ಮ ಪ್ರತ್ಯೆಕ ರಾಜ್ಯದ ಕೂಗು ವಾಪಸ್ಸು ಪಡೆದುಕೊಳ್ಳಿ ಎಂದು ಭರವಸೆ ಮಾತ್ರ ನೀಡಿದ್ದರು ಆದರೆ ಕಾರ್ಯರೂಪಕ್ಕೆ ತಂದಿರಲಿಲ್ಲಾ. 
1ನೇ ಮಾರ್ಚ 2010 ರಂದು ಬೆಂಗಳೂರಿನಲ್ಲಿ ವೈಜಿನಾಥ ಪಾಟೀಲ್ ರವರು ಕರೆದಿದ್ದ ಎಲಾ ಶಾಸಕರ, ಸಂಸದರ, ಸಂಘಟನೆಗಳ ಸಭೆಯಲ್ಲಿ, ನಿಮ್ಮ ಅದೇಷ್ಟೋ ಶಾಸಕರು, ವಿರೋಧಪಕ್ಷದ    ನಾಯಕರುಗಳು ಭಾಗವಹಿಸಿರಲಿಲ್ಲಾ, ಆದರೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಾಗೂ ಸಂಸದರಾಗಿದ್ದ ದಿ. ಅನಂತಕುಮಾರರವರು ಪಾಲ್ಗೊಂಡು, ನಮಗೇನು       ತಕರಾರಿಲ್ಲ, ಆದರೆ ನನಗೆ ಎಲ್ಲಾ ಪಕ್ಷಗಳ ಒಪ್ಪಿಗೆ ಪಡೆಯಬೇಕಾಗುತ್ತೆ ಎಂದಾಗ ಬೀದರ ಶಾಸಕರಾಗಿದ್ದ ಬಂಡೆಪ್ಪ ಖಾಶೆಂಪೂರರವರು ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಒತ್ತಡ ಹಾಕಿ ಒಪ್ಪಿಸಿದ್ದರು. 
ಮಾರ್ಚ 17 2010 ರಂದು ರಾಜ್ಯದ ಎರಡು ಸದನಗಳಲ್ಲಿ 371 ಕಲಂ ತಿದ್ದುಪಡಿಯನ್ನು ಅಂಗಿಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೊರತು  ಎಸ್.ಎಮ್. ಕೃಷ್ಣಾ ಅಲ್ಲಾ, ಸ್ವಲ್ಪ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ ಎಂದು ಸಚಿವ ಖೂಬಾ ಖಂಡ್ರೆಯವರಿಗೆ ಟಾಂಗ್ ಕೋಟ್ಟಿದ್ದಾರೆ.
ಯಡಿಯೂರಪ್ಪನವರ ಸರ್ಕಾರ ಕಳುಹಿಸಿದ್ದ ತಿದ್ದುಪಡಿ ಅಂಗಿಕಾರದ ಪ್ರಸ್ಥಾವನೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದಾಗ, ಅಮದಿನ ಗೃಹ ಸಚಿವ ಪಿ.ಚಿದಂಬರಂರವರು ಉತ್ತರಿಸಿ, ಇಂತಹ ಮಸೂದೆಗಳಿಗೆ ಅಂಗಿಕರಿಸಲು ಸಾಧ್ಯವಿಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ದಿಲ್ಲಿಯ ಜಂತರ ಮಂತರನಲ್ಲಿ ಅಂದಿನ ಕಾಂಗ್ರೇಸ್ ಸರ್ಕಾರದ ವಿರುದ್ಧ ದಿ. ವೈಜಿನಾಥ ಪಾಟೀಲ್‍ರವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಮ್ಮ ಭಾಗದ ಕಾಂಗ್ರೇಸ್ ನಾಯಕರು, ಸಂಸದರು, ಸಚಿವರು ಯಾರೂ ಸಾಥ್ ನೀಡಿರಲಿಲ್ಲಾ, ಇಂದು ಅಂಥವರಿಗೆ ಇದರ ಶ್ರೇಯಸ್ಸು ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಭಾಗದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಬಂದಗಳು, ರೈಲ ರೊಕೊ, ಬಿ.ಎಸ್.ಎನ್.ಎಲ್ ಕಚೆರಿ, ಅಂಚೆ ಕಚೇರಿಗೆ ಮುತ್ತಿಗೆ, ಅರೆಬೆತ್ತಲೆ ಮೆರವಣಿಗೆ, ಉರುಳು ಸೇವೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ, ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಮನವಿ, ಬೀದರ ನಾಂದೇಡ್ ಹೆದ್ದಾರಿ ತಡೆದು ಮನವಿ ಮುಂತಾದ ಹೊರಾಟಗಳು ನಡೆದವು, ಆದರೂ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಬಗ್ಗಿರಲಿಲ್ಲಾ ಹಾಗೂ ಜಗ್ಗಿರಲಿಲ್ಲಾ.
ಯಾವಾಗ ಈ ಪ್ರತಿಭಟನೆಯ ಕಾವು ಹೆಚ್ಚಾಯಿತೋ, ನಮ್ಮ ಬಿಜೆಪಿ ಸರ್ಕಾರ ಈ ಹೊರಾಟಕ್ಕೆ ಹೆಚ್ಚಿನ ಬಲ ನಿಡಿತ್ತೊ, ಚುನಾವಣೆ ಹತ್ತಿರ ಬರುತ್ತಿದ್ದಂತೆ, 3 ಜನೇವರಿ 2013 ರಂದು ಈ ವಿಧೇಯಕ್ಕೆ ಅಂಗಿಕಾರ ನೀಡಲಾಯಿತು, ಆದರೆ ಇದರ ಹಿಂದೆ ದಿ. ವೈಜಿನಾಥ ಪಾಟೀಲ್, ಹಾಗೂ ಅವರ ತಂಡ ಮತ್ತು ಈ ಭಾಗದ ಕನ್ನಡ ಪರ ಸಂಘಟನೆಗಳು, ಇಂಜಿನಿಯರಗಳು, ವಕಿಲರು, ವೈದ್ಯರು, ಉದ್ಯಮಿಗಳು, ಆಟೊ ಚಾಲಕರು, ಕಾರ್ಮಿಕರು, ರೈತರು, ಸಾಹಿತಿಗಳು, ಹಿಂದುಪರ ಸಂಘಟನೆಗಳು, ದಲಿತ ಸಂಘಟನೆಯವರು, ಮುಸ್ಲಿಂ ಸಂಘಟನೆಯವರು, ಸಂಘ ಸಂಸ್ಥೆಯವರು ಮುಂತಾದವರ ಹೊರಾಟಗಳ ಶ್ರಮವಿದೆ. ಒಟ್ಟಿನಲ್ಲಿ 371 (ಜೆ) ತಿದ್ದುಪಡಿಯ ಶ್ರೇಯ ಒಂದು ಪಕ್ಷಕ್ಕೆ ಸಲ್ಲಬಾರದು, ಎಲ್ಲಾ ಹೋರಾಟಗಾರರಿಗೆ, ಸಂಘಟನೆಗಳಿಗೆ ಮೋದಲು ಸಲ್ಲಬೇಕು ಎಂದು ಸಚಿವ ಖೂಬಾ ಒತ್ತಾಯಿಸಿದ್ದಾರೆ.
ಮಾನ್ಯ   ಮಲ್ಲಿಕಾರ್ಜುನ ಖರ್ಗೆಯವರಿಗೆ ಅದ್ಧೂರಿಯಾಗಿ ಸನ್ಮಾನಿಸಲಿ, ನಮಗೆ ಸಂತೋಷವಿದೆ, ಅವರ ಬಗ್ಗೆ ಅಪಾರ ಗೌರವವಿದೆ, ಆದರೆ ಈಶ್ವರ ಖಂಡ್ರೆ ತನ್ನ ಬೆಳೆ ಬೆಯಿಸಿಕೊಳ್ಳಲು, ದಿ. ವೈಜಿನಾಥ ಪಾಟೀಲ್‍ರವರ ಶ್ರಮವನ್ನು ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‍ರವರಿಗೆ ನೀಡುತ್ತಿರುವುದು ಸರಿಯಲ್ಲಾ, ಸಮಾಜಕ್ಕೆ ತಪ್ಪು ಸಂದೇಶ ನೀಡಲು ಹೊರಟಿದ್ದಾರೆ ಖಂಡ್ರೆಯವರು, ಸುಖಾ ಸುಮ್ಮನೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಸನ್ಮಾನದ ಬದಲಿಗೆ ಅಪಮಾನ ಮಾಡಲು ಹೊರಟಂತಿದೆ ಎಂದು ಈಗಾಗಲೆ ಬುದ್ದಿ ಜೀವಿಗಳು ಇದರ ಬಗ್ಗೆ ಮಾತನಾಡುತ್ತಿದ್ದಾರೆ, ಈ ಕಾರ್ಯಕ್ರಮದ  ರೂಪರೆಷಕ್ಕೆ ಖಂಡಿಸುತ್ತಿದ್ದಾರೆ, ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.