ಮತ್ತೊಂದು ಸಾಧನೆಯತ್ತ ಇಸ್ರೋ

ಬೆಂಗಳೂರು, ನ.೭-ಇಸ್ರೋ ಮತ್ತೊಂದು ಸಾಧನೆಯತ್ತ ಸಾಗಿದ್ದು, ಪಿಎಸ್‌ಎಲ್‌ವಿ ರಾಕೆಟ್ ಮೂಲಕ ’ಇಒಎಸ್-೦೧’ ಭೂವೀಕ್ಷಣೆ ಉಪಗ್ರಹ ಹಾಗೂ ಒಂಬತ್ತು ವಿದೇಶಿ ಉಪಗ್ರಹಗಳನ್ನು ಇಂದು ಉಡಾವಣೆ ಮಾಡಲಿದೆ.

ಇಸ್ರೋದ ೫೧ನೇ ಮಿಷನ್ ಇದಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣೆ ಕೇಂದ್ರದಿಂದ ಮಧ್ಯಾಹ್ನ ೩.೦೨ಕ್ಕೆ ರಾಕೆಟ್ ಉಡಾವಣೆಗೊಳ್ಳಲಿದೆ.

ಕೃಷಿ, ಅರಣ್ಯ, ಮನುಷ್ಯರ ಚಟುವಟಿಕೆ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಭೂವೀಕ್ಷಣೆ ಸ್ಯಾಟಲೈಟ್ ನೆರವಾಗಲಿದೆ.ಇದು ದೇಶಿ ಗ್ರಾಹಕ ಸ್ಯಾಟಲೈಟ್‌ಗಳು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಜೊತೆಗಿನ ವಾಣಿಜ್ಯ ಒಪ್ಪಂದದಡಿ ಉಡಾವಣೆ ಆಗಲಿವೆ.

ತಂತ್ರಜ್ಞಾನ ಸಾಮರ್ಥ್ಯ ಪ್ರದರ್ಶನದ ಲಿಥೂನೀಯ ದೇಶದ ಒಂದು ಸ್ಯಾಟಲೈಟ್, ಲಕ್ಸಂಬರ್ಗ್ ಹಾಗೂ ಅಮೆರಿಕದ ತಲಾ ನಾಲ್ಕು ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ ಸೇರಿವೆ ಎಂದು ಇಸ್ರೋ ಮೂಲಗಳು ತಿಳಿಸಿವೆ.