ಮತ್ತೆ ಹೆಚ್ಚಿದ ಸಾವು – ಸೋಂಕು

ನವದೆಹಲಿ, ಮೇ ೨೧- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಹಾವು – ಏಣಿ ಆಟ ಆಡುತ್ತಿದೆ. ಒಂದು ದಿನ ಸೋಂಕು ಹೆಚ್ಚಾಗಿ, ಸಾವು ಕಡಿಮೆಯಾದರೆ, ಮತ್ತೊಂದು ದಿನ ಸಾವು ಹೆಚ್ಚಾಗಿ ಸೋಂಕು ಕಡಿಮೆಯಾಗುತ್ತಿದೆ.
ನಿನ್ನೆ ಕೊರೊನಾ ಸೋಂಕು ಏರಿಕೆಯಾಗಿ ಸಾವಿನ ಸಂಖ್ಯೆ ಕಡಿಮೆಯಾಗಿತ್ತು. ಇಂದು ಸಾವಿನ ಸಂಖ್ಯೆ ೪ ಸಾವಿರ ಗಡಿ ದಾಟಿ ಸೋಂಕಿನ ಸಂಖ್ಯೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಹೊಸದಾಗಿ ೨,೫೯,೫೯೧ ಮಂದಿಯಲ್ಲಿ ಕಾಣಿಸಿಕೊಂಡಿದ್ದು.ಒಟ್ಟಾರೆ ಸೋಂಕಿನ ಸಂಖ್ಯೆ ,೨,೬೦,೩೧,೯೯೧ಕ್ಕೆ ಏರಿಕೆಯಾಗಿದೆ.
ಜೊತೆಗೆ ಕಳೆದ ೨೪ ಗಂಟೆಗಳಲ್ಲಿ ೪,೨೦೯ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಇದುವರೆಗೆ ಮೃತಪಟ್ಟವರ ಸಂಖ್ಯೆ ೨,೯೧,೩೩೧ ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅಮೇರಿಕಾದಲ್ಲಿ ೬.೦೨ ಲಕ್ಷ , ಬ್ರೆಜಿಲ್ ನಲ್ಲಿ ೪.೪೪ ಲಕ್ಷ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಭಾರತದಲ್ಲಿ ಸಾವಿನ ಸಂಖ್ಯೆಯಲ್ಲಿ ೨.೯೧ ಲಕ್ಷ ದಾಟಿದೆ.

ಚೇತರಿಕೆ ಹೆಚ್ಚಳ:

ದಿನದಿಂದ ಕೊರೊನಾ ಸೋಂಕಿನಿಂದ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೩,೫೭,೨೯೫ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇದರಿಂದ ದೇಶದಲ್ಲಿ ಇಲ್ಲಿಯ ತನಕ ಗುಣಗುಖರಾದವರ ಸಂಖ್ಯೆ ೨,೨೭,೧೨,೭೩೫ಕ್ಕೆ ಏರಿಕೆಯಾಗಿದೆ

ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಿ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ.

ಕುಸಿದ ಸಕ್ರಿಯ ಪ್ರಕರಣ:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ನಾಗಾಲೋಟದಲ್ಲಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಇತ್ತೀಚೆಗೆ ಸೋಂಕು ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಅದರ ಪ್ರಮಾಣ ಕಡಿಮೆಯಾಗಿದೆ.

ಸದ್ಯ ದೇಶದಲ್ಲಿ ೩೦,೨೭,೯೨೫ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ನಡುವೆ ದೇಶದಲ್ಲಿ ಇದುವರೆಗೂ ೧೯,೧೮,೭೯,೫೦೩ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ

೩೨.೪೪ ಕೋಟಿಗೆ ಪರೀಕ್ಷೆ

ದೇಶದಲ್ಲಿ ಒಂದು ಕಡೆಯ ಸೋಂಕು ಸಂಖ್ಯೆ ಏರಿಕೆ ಮತ್ತು ಇಳಿಕೆಯಾಗುತ್ತಿರುವ ನಡುವೆಯೇ ಇದುವರೆಗೂ ೩೨ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.

ನಿನ್ನೆ ೨೦,೬೧,೬೮೩ ಮಂದಿಗೆ ದೇಶಾದ್ಯಂತ ಕೋರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು ಇದರೊಂದಿಗೆ ದೇಶದಲ್ಲಿ ೩೨,೪೪,೧೭,೮೭೦ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ – ಐಸಿಎಂಆರ್ ತಿಳಿಸಿದೆ.