ಮತ್ತೆ ಶುರುವಾಯ್ತು ಗಣಿನಾಡಿನಲ್ಲಿ ಕೋವಿಡ್ ಸಾವು

ಬಳ್ಳಾರಿ ಮಾ 25 : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುವುದು ನಿರಂತರವಾಗಿದ್ದರೂ ಸಾವು ಮಾತ್ರ ಹಲವು ತಿಂಗಳಿಂದ ನಿಂತಿತ್ತು. ಆದರೆ ಕೋವಿಡ್ ಎರಡನೇ ಅಲೆಗೆ ಇಂದು ಒಂದು ಸಾವು ಸಂಭವಿಸಿದೆ. ಇದರಿಂದ ಕೋವಿಡ್ ಸಾವಿನ‌ ಕೇಕೆ ಮತ್ತೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿದೆ.
ಈ ವರಗೆ ಜಿಲ್ಲೆಯಲ್ಲಿ ಕೋವಿಡ್ ನಿಂಡ 597 ಜನರು ಸಾವನ್ನಪ್ಪಿದ್ದರು ಈಗ ಅದು 598 ಕ್ಕೇರಿದೆ.
ಈವರಗೆ ಜಿಲ್ಲೆಯಲ್ಲಿ 589109 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು, ಅವರಲ್ಲಿ 39581 ಜನರಲ್ಲಿ ಸೋಂಕು ಕಾಣಿಸಿ‌ಕೊಂಡಿದೆ. ಸಧ್ಯ ಇಂದಿನ 15 ಸೇರಿ‌ 159 ಜನ ಪಾಸಿಟಿವ್ ಇದ್ದಾರೆ.