ಮತ್ತೆ ಶುರುವಾದ ಧಮ್ ಬಿರಿಯಾನಿ ಹವಾ

ಕೋಲಾರ,ಜ.೪: ಕೋಲಾರದಲ್ಲಿ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಧಮ್ ಬಿರಿಯಾನಿ ಹವಾ ಮತ್ತೆ ಶುರುವಾಗಿತ್ತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಭರ್ಜರಿ ಬಿರಿಯಾನಿ ಪಾರ್ಟಿ ಇಟ್ಟಿದ್ದರು. ಕೋಲಾರ ಹೊರವಲಯದ ಕೋಗಿಲಹಳ್ಳಿ ಗ್ರಾಮದ ತಮ್ಮ ನಿವಾಸ ಬಳಿ ಬಿರಿಯಾನಿ ಪಾರ್ಟಿಯನ್ನ ಆಯೋಜನೆ ಮಾಡಲಾಗಿತ್ತು. ಇನ್ನು ಚುನಾವಣಾಯಲ್ಲಿ ಗೆದ್ದವರಿಗೆ ಅಭಿನಂದನೆಗಳು ಹಾಗೂ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಬಿರಿಯಾನಿ ಇತ್ತು. ಸುಮಾರು ಎರಡು ಸಾವಿರ ಜನರಿಗೆ ಬಿಯಾನಿ ಊಟದ ಅಡುಗೆ ತಯಾರಾಗುತ್ತಿದ್ದು, ೫೦೦ ಕೆಜಿ ಚಿಕನ್, ೩೦೦ ಕೆಜಿ ಮಟನ್ ಬಿರಿಯಾನಿ ಮಾಡಿಕೊಳ್ಳಲಾಗಿತ್ತು. ಹಲವಾರು ದಿನಗಳ ನಂತರ ಮತ್ತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದು, ಬಿರಿಯಾನಿ ಹವಾ ಜೋರಾಗಿತ್ತು.