ಮತ್ತೆ ಶುರುವಾಗಿದೆ `ಗಿಚ್ಚಿ ಗಿಲಿಗಿಲಿ’

ಬಿಗ್‍ಬಾಸ್  ಶೊ ಮುಗಿದ ಬಳಿಕ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಲು “ ಗಿಚ್ಚಿ ಗಿಲಿಗಿಲಿ” ಸೀಸನ್ ಮೂರು ಆರಂಭವಾಗಿದೆ.ಈ ಭಾರಿ ಸಾಧುಕೋಕಿಲ, ಶೃತಿ ಅವರ ಜೊತೆಗೆ ನಟ ಕೋಮಲ್ ತೀರ್ಪುಗಾರರಾಗಿದ್ದಾರೆ, ನಿರಂಜನ್ ದೇಶಪಾಂಡೆ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ

ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ, ಕಳೆದ ಶನಿವಾರದಿಂದ ಶೋ ಆರಂಭವಾಗಿದೆ.

ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ ಕನ್ನಡದ ಅದ್ಭುತ ಕಾಮಿಡಿಯನ್‍ಗಳ ಜೊತೆಗೆ ಬಿಗ್‍ಬಾಸ್‍ನ ಈ ಸೀಸನ್ ಸೇರಿದಂತೆ ವಿವಿಧ ಸೀಸನ್‍ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎಂದಿದ್ಧಾರೆ

ಸಾಧುಕೋಕಿಲ ಮಾತನಾಡಿ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು

ನಟಿ ಶೃತಿ,ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದರೆ ನಟ ಕೋಮಲ್ ಕುಮಾರ್, “ಗಿಚ್ಚಿ ಗಿಲಿಗಿಲಿ” ಶೋನಲ್ಲಿ ತೀರ್ಪುಗಾರರಾಗಿರುವುದು ಖುಷಿಕೊಟ್ಟಿದೆ ಎಂದರು.

ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ಇರಲಿ ಎಂದಿದ್ಧಾರೆ

ತುಕಾಲಿ ಸಂತೋಷ್ , ಪತ್ನಿ ಮಾನಸ ,ಮಂಜು ಪಾವಗಡ,ಕಲಾವಿದ ವಿನೋದ್ ಗೊಬ್ಬರಗಾಲ,ದ್ರೋಣ್ ಪ್ರತಾಪ್, ಇಶಾನಿ , ಮೈಕಲ್ ಹುಲಿ ಕಾರ್ತಿಕ್, ಶಿವು, ಚಿಲ್ಲರ್ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್, ನಂದೀಶ್ ಮಡಿವಾಳ, ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್‍ಸ್ಟಾರ್”ಪುನೀತಾ, “ಮಜಾ ಟಾಕೀಸ್” ಮೋಹನ್, ದೀಕ್ಷಾ, ಖುಷಿ, ಮಧುಮತಿ ಹಲವರು ಭಾಗಿಯಾಗಿದ್ದಾರೆ