ಮತ್ತೆ ಮದುವೆ ಆಗ್ತಾರಂತೆ ಮಲೈಕಾ

ಮುಂಬೈ, ಏ ೬- ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತೆ ಮದುವೆಯಾಗಲು ಸಿದ್ದರಾಗಿದ್ದಾರೆ.
ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಎಲ್ಲರ ಕಣ್ಣುಗಳು ಇದೀಗ ಈ ಜೋಡಿಯ ಮೇಲಿದೆ. ಮಲೈಕಾ-ಅರ್ಜುನ್ ಮದುವೆ ವಿಚಾರಕ್ಕೆ ನಟಿ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತಾಡಿದ ಮಲೈಕಾ ಅರೋರ ಇದೀಗ ಮತ್ತೆ ಮದುವೆಯಾಗುವುದಾಗಿ ಹೇಳಿಕೆ ನೀಡಿದ್ದಾರೆ. ಅರ್ಬಾಜ್‌ನ್‌ನಿಂದ ವಿಚ್ಛೇದನ ಪಡೆದ ಬಳಿಕ ಮಲೈಕಾ ಅರ್ಜುನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಯಾವುದೇ ಪಾರ್ಟಿಯಲ್ಲೂ ಮಲೈಕಾ ಜೊತೆ ಅರ್ಜುನ್ ಇರುತ್ತಾರೆ. ಇದೀಗ ಅರ್ಜುನ್ ಕಪೂರ್ ಜೊತೆ ನಟಿ ಮದುವೆ ಪ್ಲಾನ್ ಮಾಡಿದ್ದಾರೆ.

ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಆದರೆ ಇದು ನಮ್ಮ ನಡುವೆ ಎಂದಿಗೂ ಸಮಸ್ಯೆಯಾಗಿಲ್ಲ. ಅರ್ಜುನ್ ಕಪೂರ್ ಬಹಳ ವಿವೇಚನೆ ಹಾಗೂ ಕಾಳಜಿಯುಳ್ಳ ವ್ಯಕ್ತಿ. ನಾನು ಅವನ ಗುಣಗಳನ್ನು ಹೆಚ್ಚು ಮೆಚ್ಚುತ್ತೇನೆ ಎಂದು ಮಲಿಕಾ ಅರೋರಾ ಬ್ರೈಡ್ಸ್ ಟುಡೇಗೆ ತಿಳಿಸಿದ್ದಾರೆ.

ಅರ್ಜುನ್ನೊಂದಿಗೆ ನಾನು ಹೊಂದಿರುವ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಾನು ಇಷ್ಟಪಡುತ್ತೇನೆ. ಇಬ್ಬರೂ ಗೃಹಸ್ಥಾಶ್ರಮಕ್ಕೆ ಕಾಲಿಡಲು ನಿರ್ಧರಿಸಿರುವುದಾಗಿ ಮಲೈಕಾ ಹೇಳಿದ್ದಾರೆ.
ಮಲೈಕಾ ಮತ್ತು ಅರ್ಬಾಜ್ ೨೦೧೭ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರವೂ, ದಂಪತಿ ತಮ್ಮ ಮಗ ಅರ್ಹಾನ್ ಖಾನ್ಗೆ ಸಂಬಂಧಿಸಿದ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಭೇಟಿಯಾಗಿ ಪಾರ್ಟಿ ಕೂಡ ಮಾಡಿದ್ದಾರೆ.