ಮತ್ತೆ ಬಳ್ಳಾರಿ ಕಡೆ ನೋಡುವಂತೆ ಅಭಿವೃದ್ಧಿ
ಹುಲಿ ಹಸಿದಾಗ ಮಾತ್ರ ಭೇಟಿಯಾಡುತ್ತೆ: ಜನಾರ್ಧನರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.05:  ಗಣಿಗಾರಿಕೆಗೆ ವಿಧಿಸುತ್ತಿರುವ ಅರಣ್ಯ ತೆರಿಗೆ ಹಣದಿಂದ ಬರುವ ಹತ್ತು ವರ್ಷಗಳಲ್ಲಿ   ದೇಶವೇ ಇತ್ತ ನೋಡುವಂತೆ ಬಳ್ಳಾರಿಯ ಅಭಿವೃದ್ಧಿ ಅಗಲಿದೆ ಎಂದಿರುವ ಮಾಜಿ ಸಚಿವ ಜನಾರ್ಧನರೆಡ್ಡಿ. ತಾವು ಮನೆಯಲ್ಲಿ ಸುಮ್ಮನೇ ಕುಳಿತಿರುವುದಾಗಿ ಮಾತನಾಡುವವರಿಗೆ ಹುಲಿ ಹಸಿದಾಗ ಮಾತ್ರ ಭೇಟೆಯಾಡಲು ಬರುತ್ತೆ ಎನ್ನುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ.
ಅವರು ನಿನ್ನೆ ಸಂಜೆ ನಗರದಲ್ಲಿ 25 ನೇ ವಾರ್ಡಿನ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ವಿಮಾನ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸುಸಜ್ಜಿತ  ಕ್ರೀಡಾಂಗಣ, ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳು, ಚಿತ್ರನಟರು  ಬಳ್ಳಾರಿಗೆ ಬರಲು ಮೂಗು ಮುರಿಯುತ್ತಿದ್ದರು.  ಅದಕ್ಕಾಗಿ ನಾನು ನೋಡಿದ್ದ ಲಂಡನ್, ಸಿಂಗಪುರ ಮಾದರಿಯಲ್ಲಿ ಬಳ್ಳಾರಿ ಜಿಲ್ಲೆಯನ್ನು  ಅಭಿವೃದ್ಧಿ ಪಡಿಸುವ ಕನಸು ಕಂಡೆ ಸರ್ಕಾರದ ಅನುದಾನದಿಂದ ಇದನ್ನು ಸಾಕಾರ ಮಾಡುವುದು ಅಸಾಧ್ಯವೆಂದು. ಅಂದು ಗಣಿಗಾರಿಕೆಯಿಂದ ಬರುವ ಆದಾಯದಲ್ಲಿ ಶೇ 6 ರಷ್ಟು   `ಅರಣ್ಯ ಅಭಿವೃದ್ಧಿ ತೆರಿಗೆ’ ಜಾರಿಗೆ   ತರಲಾಗಿತ್ತು. ಅದಕ್ಕೆ ಗಣಿ ಮಾಲೀಕರು `ರೆಡ್ಡಿ ಅವರು ರಿಪಬ್ಲಿಕ್ ಆಡಳಿತ ನಡೆಸುತ್ತಿದ್ದಾರೆಂದು ಅಪಪ್ರಚಾರ ಮಾಡಿದರು.  ಅದರ ವಿರುದ್ದ ನ್ಯಾಯಾಲಯಕ್ಕೆ ಮೊರೆ ಹೋದರು, ನಾನು ಸರ್ಕಾರದಿಂದ  ವಿಧಿಸಲು ಮುಂದಾಗಿದ್ದ ಅರಣ್ಯ ತೆರಿಗೆ ಪದ್ಧತಿ ಸರಿಯಿದೆ ಎಂದು ನ್ಯಾಯಾಲಯಗಳು  ತೀರ್ಪು ನೀಡಿವೆ. ಇದರಿಂಲಭಿಸಲಿದೆ. ಕಳೆದ 10 ವರ್ಷದಲ್ಲಿ  ತೆರಿಗೆ ಹಣದಿಂದ  ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ 25 ಸಾವಿರ ಕೋಟಿ ರೂ. ಅನುದಾನ ಬಂದಿದ್ದು, ಅದರಲ್ಲಿ ಬಳ್ಳಾರಿಗೆ 15 ಸಾವಿರ ಕೋಟಿ ರೂ. ಲಭಿಸಲಿದ್ದು ಈ ಹಣದಿಂದ  ಮುಂದಿನ ಹತ್ತು ವರ್ಷಗಳಲ್ಲಿ ಬಳ್ಳಾರಿ ಅಭಿವೃದ್ಧಿ ನೋಡಲು ಇಡೀ ದೇಶದ ಜನರು ಬರಬೇಕು. ಅಂತಹ ಅವಕಾಶ ಬಳ್ಳಾರಿಗೆ ಇದೆ. ಈ ಕುರಿತು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲುಗೆ ಸೂಚಿಸಿದ್ದೇನೆ ಎಂದರು.
ಬಳ್ಳಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನೆಲ್ಲ ಕನಸಿನ ಯೋಜನೆಗಳಾದ  ಅಂತರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ,  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ  ಸರ್ಕಾರದಿಂದಲೇ ನಿರ್ಮಿಸಲು ಸಚಿವ ಸಂಪುಟದಲ್ಲಿ ಅನುಮೊದನೆ ಲಭಿಸಿದೆ. ರೀಂಗ್ ರೋಡ್ ಕಾಮಗಾರಿ ಪೂರ್ಣಗೊಳ್ಳಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯೂ ಅಂತ್ಯಕ್ಕೆ ಬಂದಿದೆ ಎಂದರು.
ಅಕ್ರಮ ಗಣಿಗಾರಿಕೆ ಆರೋಪ, ಜೈಲುವಾಸ, ಜಾಮೀನು, ಬಳ್ಳಾರಿಯಿಂದ ಹೊರಗೆ ವಾಸ, ನಂತರ ಕಳೆದ ಒಂದು ವರ್ಷದಿಂದ ಬಳ್ಳಾರಿಯಲ್ಲೇ ವಾಸ ಇದ್ದೇನೆ ಎಂದು ತಮ್ಮ ಹಿಂದನ ದಿನಗಳನ್ನು ಮೆಲುಕುಹಾಕಿದ ಜನಾರ್ಧನರೆಡ್ಡಿ ಅವರು. ನಾನು ರಾಜಕೀಯವಾಗಿ ಸುಮ್ಮನೇ ಕುಳಿತಿರುವ ಬಗ್ಗೆ ನನ್ನ‌ ವಿರೋಧಿಗಳ ಮಾತನಾಡುತ್ತಿದ್ದಾರಂತೆ. ನಾನು ಅವರಿಗೆ ಹೇಳ ಬಯಸುವುದಿಷ್ಟೇ ಹುಲಿ ಹಸಿವಾದಾಗ ಮಾತ್ರ ಭೇಟೆಯಾಡುತ್ತೆ ಆ ಕಾಲ ಬರುತ್ತೆ ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಜನಾರ್ಧನರೆಡ್ಡಿಯವರನ್ನು ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯ್ತು.   ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು, ಮುಖಂಡ ನೂರ್ ಮಾತನಾಡಿದರು. ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪಾಲಿಕೆಯ ಮಾಜಿ  ಸದಸ್ಯ ಎಸ್ ಮಲ್ಲನಗೌಡ ಸೇರಿದಂತೆ ಹಲವರು ಇದ್ದರು. ಆದರೆ ಈ ಹಿಂದೆ ಇಂತಹ ಕಾರ್ಯಕ್ರಮಗಳಲ್ಲಿ ಕಂಡು ಬರುತ್ತಿದ್ದ ಹಲವರು ಕಾಣದಿದ್ದು  ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.