ಮತ್ತೆ ತುಂಬಿ ಹರಿದ ತುಂಗಭದ್ರ ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಬಳ್ಳಾರಿ

ಸೆ.೨೧: ಮಲೆನಾಡಿನಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿ ನದಿಗೆ ನೀರು ಬಿಟ್ಟಿರುವುದರಿಂದ. ಜಿಲ್ಲೆಯ ತುಂಗಭದ್ರಾ ಜಲಾಶಯ ಮತ್ತೊಮ್ಮೆ ತುಂಬಿ ಹರಿಯತೊಡಗಿದೆ. ಇಂದು ಬೆಳಿಗ್ಗೆ ಜಲಾಶಯದ ೬೮ ಗೇಟುಗಳನ್ನು ತೆರೆದು ಒಂದು ಲಕ್ಷದ ೧೦ ಸಾವಿರ ಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ನದಿಗೆ ಹರಿ ಬಿಡಲಾಗಿದೆ. ಜಲಾಶಯದ ನದಿ ಪಾತ್ರದ ಕೆಳಭಾಗದ ಮತ್ತು ಮೇಲ್ಭಾಗದ ಜನತೆಗೆ ಮತ್ತೊಮ್ಮೆ ಪ್ರವಾಹದ ಬೀತಿ ಎದುರಾಗಿದೆ.ನದಿ ಪಾತ್ರದ ಜನ ಎಚ್ಚರದಿಂದ ಇರಬೇಕು ಎಂದು ತುಂಗಭದ್ರ ಆಡಳಿತ ಮಂಡಳಿ ತಿಳಿಸಿದೆ.
ತುಂಗಾ ಜಲಾಶಯದಿಂದ ೬೩ ಸಾವಿರಕ್ಕೂ ಹೆಚ್ಚು ಮತ್ತು ಮತ್ತು ಭದ್ರಾ ಜಲಾಶಯದಿಂದ ೫೦ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನದಿಗೆ ಹರಿಬಿಡಲಾಗಿದೆ ಎರೆಡು ನದಿಗಳು ತುಂಬಿ ಹರಿಯತೊಡಗಿವೆ. ಸಧ್ಯ ಜಲಾಶಯಕ್ಕೆ ೭೦ ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದರೂ ಅದು ೧,.೦ ರಿಂದ ೧.೪೦ ಕ್ಯುಸೆಕ್ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಂಡಳಿಯ ಇಂಜಿನೀಯರ್ ವಿಶ್ವನಾಥ್ ತಿಳಿಸಿದ್ದಾರೆ.
ಇಂದು ಜಲಾಶಯದ ೩೩ ಕ್ರಸ್ಟ್ಗೇಟ್ಗಳ ಪೈಕಿ ೩೦ ಗೇಟ್ಗಳನ್ನು ತೆಗೆದು ನದಿಗೆ ಒಂದು ಲಕ್ಷದ ೧೦ ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಕಂಪ್ಲಿ ಮತ್ತು ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ. ಜಲಾಶಯದಿಂದ ನೂರು ಧುಮ್ಮಿಕ್ಕಿ ಹರಿಯುವ ದೃಶ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.