ಮತ್ತೆ ಟ್ರೋಲ್‌ಆದ ಉರ್ಫಿ ಜಾವೇದ್

ಮುಂಬೈ, ಮಾ ೧೧- ತೊಡುವ ಬಟ್ಟೆಯಿಂದಲೇ ಸದಾ ಸುದ್ದಿಯಲ್ಲಿರವ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಇದೀಗ ಮತ್ತೆ ಅದೇ ಬಟ್ಟೆಯಿಂದ ಟ್ರೋಲ್‌ಗೆ ಒಳಗಾಗಿದ್ದಾರೆ.

ಸ್ಟಾರ್ ಉರ್ಫಿ ಜಾವೇದ್ ಅವರು ವಿಚಿತ್ರ ಬಟ್ಟೆ ಮೂಲಕ ಮತ್ತೊಮ್ಮೆ ಇಂಟರ್ನೆಟ್ ಬಿಸಿ ಏರಿಸಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದು, ಅವರ ಹೊಸ ಅವತಾರದಿಂದ ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ. ನಟಿಯ ವೇಷಭೂಷಣ ಕಂಡು ನೆಟ್ಟಿಗರು ತರಾವೇರಿ ಕಮೆಂಟ್‌ಮಾಡಿದ್ದಾರೆ.

ಪಾಪರಾಜಿಯೊಬ್ಬರು ನಟಿಯ ಏರ್ಪೋರ್ಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅವರನ್ನು ಬಿಡಿ, ಬಹಳ ಲೇಟ್ ಆಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಉರ್ಫಿ ಪ್ರತಿದಿನ ಏರ್ಪೋರ್ಟ್ನಲ್ಲಿ ಕಾಣಿಸಿಕೊಳ್ಳುತ್ತಾರೆ ಆದ್ರೆ ವಿಮಾನ ಹತ್ತುವುದಿಲ್ಲ. ಅವರು ಹಿಡಿದಿರುವ ಬ್ಯಾಗ್ ಕೂಡ ಬೇರೆಯವರದ್ದೇ ಅನಿಸುತ್ತಿದೆ, ಅಷ್ಟು ಬ್ಯಾಗ್‌ಗಳನ್ನು ಏಕೆ ಹಿಡಿಯುತ್ತಾರೋ, ಅವರ ಸರಾಸರಿ ಉಡುಗೆ ತೂಕ ಕೇವಲ ೨೫ ಗ್ರಾಂ” ಎಂದು ನೆಟ್ಟಿಗರೊಬ್ಬರು ಗೇಲಿ ಮಾಡಿದ್ದಾರೆ.

ಉರ್ಫಿ ಜಾವೇದ್ ಉತ್ತಮ ವ್ಯಕ್ತಿಯಾಗಿ ಕಾಣುತ್ತಾರೆ, ಅದು ಸತ್ಯಾಂಶ. ಈ ಉಡುಗೆ ಬಹಳ ಚೆನ್ನಾಗಿದೆ. ಜನರಿಗೆ ಇಷ್ಟ ಆಗಲಿ ಅಥವಾ ಇಷ್ಟ ಆಗದೇ ಇರಲಿ, ಅವರು ವಿಭಿನ್ನವಾಗಿದ್ದು, ಬಹಳ ಆತ್ಮವಿಶ್ವಾಸದಿಂದ ಕೂಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರುವ ಉರ್ಫಿ ಈವರೆಗೆ ಹಲವು ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.