ಮತ್ತೆ ಜೊತೆಯಾದ ಡೊಳ್ಳು ತಂಡ

“ಡೊಳ್ಳು’ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ಪವನ್ ಒಡೆಯರ್ ಮತ್ತು ನಿರ್ದೇಶಕ ಸಾಗರ್ ಪುರಾಣಿಕ್ ಮತ್ತೊಮ್ಮೆ ಜೊತೆಯಾಗಿದ್ದಾರೆ
ಕರ್ನಾಟಕದ ಜನಪದ ಕಲೆ ಡೊಳ್ಳುಗೆ ಕೈಗನ್ನಡಿ ಹಿಡಿದ್ದ ಚಿತ್ರಕ್ಕೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳಿದ್ದರು.ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು
ಒಡೆಯರ್ ಮೂವೀಸ್ ಬ್ಯಾನರ್ ಮೂರನೇ ಕಾಣಿಕೆಯಾಗಲಿರುವ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದರೂ ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಎಂದಿದ್ದಾರೆ ನಿರ್ಮಾಪಕ ಪವನ್ ಒಡೆಯರ್..
ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ಈ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ. ಟೈಟಲ್ ಶೀಘ್ರದಲ್ಲೇ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.