ಮತ್ತೆ ಕ್ಯಾಮರಾ ಹಿಡಿದ ಚಾಲೆಂಜಿಂಗ್ ಸ್ಟಾರ್

ಮೈಸೂರು, ಜ.12 :- ಚಂದನವನದ ಸೂಪರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯನ್ನೇನಾದರೂ ಬಿಟ್ಟುಬಿಟ್ಟರಾ? ಛಾಯಾಗ್ರಾಹಕರಾದರಾ? ಮತ್ತೆ ಕ್ಯಾಮರಾ ಹಿಡಿದು ಫೆÇೀಟೋ ಕ್ಲಿಕ್ ಮಾಡುತ್ತಿದ್ದಾರೆ ಅಂತ ಪ್ರಶ್ನೆ ಹಾಕಿಕೊಳ್ಳಬೇಡಿ, ತೆರೆಯ ಮೇಲೆ ಕಾಣಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವೃತ್ತಿ ಜೀವನದಿಂದ ಸ್ವಲ್ಪ ಆಚೆ ಬಂದು ಕ್ಯಾಮರಾ ಹಿಡಿದು ಪೆÇೀಟೋ ತೆಗೆಯುತ್ತಿರುವುದು ಕಂಡು ಬಂದಿದೆ.


ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಫಾರಿ ನಡೆಸಿದರು. ನಟ ದರ್ಶನ್ ಕ್ಯಾಮರಾ ಹಿಡಿದು ಸಫಾರಿ ವೇಳೆ ಕಾಣಿಸಿಕೊಂಡ ಹುಲಿಯೊಂದರ ಚಿತ್ರ ಸೆರೆ ಹಿಡಿದರು. ಆಗಾಗ ಕಬಿನಿಯಲ್ಲಿ ಸ್ನೇಹಿತರ ಜೊತೆ ನಟ ದರ್ಶನ್ ಸಫಾರಿ ಮಾಡುತ್ತಾರೆ. ಇದೀಗ ಸಫಾರಿ ವೇಳೆ ದರ್ಶನ್ ಅವರಿಗೇ ಹುಲಿಯ `ದರ್ಶನ’ವಾಗಿದೆ. ಹುಲಿಯ ಪೆÇೀಟೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ನಟ ಫೂಲ್ ಖುಷ್ ಆಗಿರುವುದು ಕಂಡು ಬಂದಿದೆ. ನಟ ದರ್ಶನ್ ಹುಲಿಯ ಪೆÇೀಟೋ ಕ್ಲಿಕ್ಕಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮೆಚ್ಚುಗೆ ಪಡೆಯುತ್ತಿದೆ.