ಮತ್ತೆ ಕಾಂಗ್ರೆಸ್  ಸೇರಿದನಾರಾ ಪ್ರತಾಪ್ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,3- ಮೂಲತಃ ಜೆಡಿಎಸ್ ಪಕ್ಷದ ಮುಖಂಡರಾಗಿ,  ಬುಡಾ ಅಧ್ಯಕ್ಷರಾಗಿ, ಜಿಲ್ಲಾ ಅಧ್ಯಕ್ಷರಾಗಿ,  ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಾರಾ ಪ್ರತಾಪ್ ರೆಡ್ಡಿ ಅವರು. ಈ ಹಿಂದೆ ಒಮ್ಮೆ (2013 ರಲ್ಲಿ) ಕಾಂಗ್ರೆಸ್ ಪಕ್ಷ ಸೇರಿ ಹೊರ ಬಂದಿದ್ದರು. ನಂತರ ಜೆಡಿಎಸ್ ಸೇರಿದ್ದರು  ಈಗ ಮತ್ತೊಮ್ಮೆ ಜೆಡಿಎಸ್ ತೊರೆದು ಇಂದು ನಗರದ ನಕ್ಷತ್ರ ಹೊಟೇಲ್ ನಲ್ಲಿ ಇಂದು  ನಡೆದ ಸರಳ ಸಮಾರಂಭದಲ್ಲಿ
ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ರಾಜ್ಯ ನಾಸೀರ್ ಹುಸೇನ್ ಅವರು ಪ್ರತಾಪ್ ರೆಡ್ಡಿ ಅವರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಬಲ‌ ಬಂದಿದೆ. ಉತ್ತಮ ನಾಯಕರಾಗಿ ತಮ್ಮದೇ ಬೆಂಬಲಿಗರನ್ನು ಹೊಂದಿದ್ದು ಪಕ್ಷಕ್ಕೆ ಸಹಕಾರಿ ಆಗಲಿದೆಂದರು.
ನಾರಾ ಭರತ್ ರೆಡ್ಡಿ ಮಾತನಾಡಿ. ರೈತರ ಪರ ಹೋರಾಟ ಮಾಡಿ ತಮ್ಮದೇ ಶಕ್ತಿ ಹೊಂದಿರುವ, ಸ್ವತಃ ನಮ್ಮ ಚಿಕ್ಕನವರಾಗಿರುವ ಪ್ರತಾಪ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಜೆ  ಸೇರಿರುವುದು ವಿಶೇಷ ಶಕ್ತಿ ಬಂದಂತಾಗಿದೆ.
ಈ ಹಿಂದೆ 2004 ರಲ್ಲಿ ಜೆಡಿಎಸ್ ನಲ್ಲಿ ನಮ್ಮ ತಂದೆ ನಸರಾಯಣ ರೆಡ್ಡಿ ಮತ್ತು ಇವರು ಹೊಂದಾಗಿ ಚುನಾವಣೆ ಎದುರಿಸಿ ಅಪ್ಪ ಶಾಸಕರಾಗಲು ಕಾರಣರಾಗಿದ್ದರು. ಈಗ ಮತ್ತೆ ನಮ್ಮ ಜೊತೆಗೆ ಸೇರಿರುವುದರಿಂದ ನಾನು ಬಳ್ಳಾರಿ ನಗರದಲ್ಲಿ ವಿಜಯ ಸಾಧಿಸಲು  ಸಹಕಾರಿ ಆಗಲಿದೆ. ಅಷ್ಟೇ ಅಲ್ಲ ಕಂಪ್ಲಿ, ಸಿರುಗುಪ್ಪ ಮತ್ತು ಬಳ್ಳಾರಿ ಗ್ರಾಮೀಣದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಂದರು.
ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಸ್ವಾಗತಿಸಿದರು. ಪಕ್ಷದ ಮುಖಂಡರಾದ ಕಲ್ಲಕಂಬ ಪಂಪಾಪತಿ ಮೊ ದಲಾದವರು  ಇದ್ದರು.