ಮತ್ತೆ ಒಂದೂವರೆ ಲಕ್ಷ ಚೀಲ ಮೆಣಸಿನಕಾಯಿ ಆವಕ

ಬ್ಯಾಡಗಿ,ಜ26:ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ಸ್ವಲ್ಪ ಇಳಿಮುಖವಾದರೂ ಗುರವಾರ (ಜ.25) ರಂದು 1.54 ಲಕ್ಷ ಚೀಲ ಆವಕವಾಗಿದ್ದು ಎಂದಿನಂತೆ ಕಡ್ಡಿ, ಡಬ್ಬಿ, ಗುಂಟೂರು 3 ತಳಿಗಳು ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಲಕ್ಷದ ಆಸುಪಾಸಿನಲ್ಲಿದ್ದ ಮೆಣಸಿನಕಾಯಿ ಆವಕ ಚೇತರಿಕೆಯಿಂದ ಕಳೆದ ವಾರ 168489 ಚೀಲಗಳು ಮಾರಾಟಕ್ಕೆ ಲಭ್ಯ ವಿತ್ತು, ಕಳೆದ ವಾರಕ್ಕಿಂತ ಹೆಚ್ಚಾಗಬಹುದೆಂದು ವರ್ತಕರು ನಿರೀಕ್ಷಿಸಿದ್ದರಾದರೂ ಇಂದು 154769 ಚೀಲಗಳಷ್ಟು ಮೆಣಸಿನ ಕಾಯಿ ಆವಕವಾಗಿದ್ದು ಸುಮಾರು 12 ಸಾವಿರ ಚೀಲಗಳಷ್ಟು ಕೊರತೆ ಕಂಡು ಬಂದಿದೆ.
ಸರಾಸರಿ ದರದಲ್ಲಿ ಕಡ್ಡಿತಳಿ ಏರಿಕೆ:ಕಳೆದವಾರ ಕಡ್ಡಿತಳಿ ಸರಾಸರಿ 37 ಸಾವಿರ (ಪ್ರತಿಕ್ವಿಂಟಲ್‍ಗೆ) ರೂ.ಗಳಿಗೆ ಮಾರಾಟವಾಗಿ ತ್ತಾದರೂ ದರದಲ್ಲಿ ಸ್ವಲ್ಪಮಟ್ಟಿನ ಏರಿಕೆ ಕಂಡುಬಂದಿದ್ದು 38 ಸಾವಿರಕ್ಕೆ ಮಾರಾಟವಾಗಿದೆ, ಇನ್ನುಳಿದಂತೆ ಡಬ್ಬಿತಳಿ ಸರಾಸರಿ 40 ಸಾವಿರ ಹಾಗೂ ಗುಂಟೂರ 14 ಸಾವಿರ ರೂ.ಸರಾಸರಿ ದರದಲ್ಲಿ ಬಿಕರಿಗೊಂಡವು, ಗುಣಮಟ್ಟದ ಕಡ್ಡಿತಳಿ ಅತೀ ಹೆಚ್ಚು ರೂ.58 ಸಾವಿರ ಡಬ್ಬಿತಳಿ ರೂ.56 ಸಾವಿರಕ್ಕೆ ಮಾರಾಟವಾದವು.
ನಾಲ್ಕುನೂರು ಸಮೀಪಿಸಿದ ಖರೀದಾರರ ಸಂಖ್ಯೆ:ಮೆಣಸಿನಕಾಯಿ ಚೀಲದ ಆವಕ ಹೆಚ್ಚಾಗುತ್ತಿದ್ದಂತೆ ಮೆಣಸಿನಕಾಯಿ ಖರೀದಿ ಸಲು ವರ್ತಕರು ಮುಗಿ ಬೀಳುತ್ತಿದ್ದಾರೆ, ಹೀಗಾಗಿ ಕಳೆದ ವಾರ 383 ರಷ್ಟಿದ್ದ ಖರೀದಿದಾರರ ಸಂಖ್ಯೆ ಇಂದು 394ಕ್ಕೆ ಏರಿಕೆ ಯಾಗಿದೆ, ಒಟ್ಟು 297 ಕಮೀಶನ್ ಎಜೆಂಟ್‍ರ ಅಂಗಡಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದುದಾಗಿ ಮಾರುಕಟ್ಟೆ ಮೂಲಗಳು ದೃಡಪಡಿಸಿವೆ.
ಗುರುವಾರ ಮಾರುಕಟ್ಟೆ ದರ: ಗುರುವಾರ(ಜ.25) ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ 3029 ಗರಿಷ್ಠ 58699 ಸರಾಸರಿ 38029, ಡಬ್ಬಿತಳಿ ಕನಿಷ್ಠ 3269 ಗರಿಷ್ಠ 56869 ಸರಾಸರಿ 40129, ಗುಂಟೂರು ಕನಿಷ್ಠ 1669 ಗರಿಷ್ಟ 18109 ಸರಾಸರಿ 14589 ರೂ.ಗಳಿಗೆ ಮಾರಾಟವಾಗಿವೆ.