ಮತ್ತೆ ಎರಡುದಿನ ಖರೀದಿಗೆ ಅವಕಾಶ ಮುಗಿಬಿದ್ದ ಜನ ನಿವೃತ್ತಿಯ ಕೊನೆಯ ದಿನವೂ ಲವಲವಿಕೆಯಿಂದಲೇ ಕಾರ್ಯನಿರ್ವಹಿಸಿದ ಪೊಲೀಸ

ಹೊಸಪೇಟೆ ಮೇ31: ಕರೋನಾ ಮಹಾಮಾರಿಯ 6 ದಿನಗಳ ನಿರ್ಭಂದದ ನಂತರ ಇಂದು ತೆರವುಗೊಂಡ ಮಾರುಕಟ್ಟೆಗೆ ಜನ ಸಾಗರ ಹರಿದುಬಂದು ಮುಂದಿನ ಒಂದು ವಾರಕ್ಕೆ ಬೇಕಾಗುವ ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು. ನಗರದಲ್ಲಿ ಜನಜಂಗುಳಿ ಕಾಣದಂತೆ ಮಾಡಲು ಅಗತ್ಯವಸ್ತುಗಳನ್ನು ಖರೀದಿಸಲು ಬರುವವರಿಗೆ ವಾಹನ ನಿಲುಗಡೆ, ಏಕಮುಖ ಸಂಚಾರ ಸೇರಿದಂತೆ ಪ್ರತೇಕ ವಲಯಗಳು ಹಾಗೂ ಹಣ್ಣು ತರಕಾರಿ ಸೇರಿದಂತೆ ದಿನಸಿ ಖರೀದಿಗೂ ಪ್ರತೇಕ ಸ್ಥಳಗಳನ್ನು ಮಾಡಿದ್ದು ಗೊಂದಲವಾಗದಂತೆ ಮಾಡಲು ಸಹಕಾರಿಯಾಗಿತು.
ಇನ್ನು ರಸ್ತೆಯಲ್ಲಿ ಅನಗತ್ಯವಾಗಿ ತಿರುಗುವ ಹಾಗೂ ಮಕ್ಕಳೊಂದಿಗೆ ಬಂದವರಿಗೆ ಬಿಸಿ ಮುಟ್ಟಿಸುವ ಕೆಲಸವೂ ಪೊಲೀಸರಿಂದ ನಡೆಯಿತು.
ಇನ್ನು ನಿವೃತ್ತಯ ಕೊನೆದಿನವಾದ ಇಂದು ಹೊಸಪೇಟೆ ಸಂಚಾರಿ ಠಾಣೆಯ ಪಿಎಸ್‍ಐ ರಾಮಪ್ಪ ಹಾಗೂ ಎಎಸ್‍ಐ ಗಜಾನನ ನಾಯ್ಕ್ ಅಷ್ಟೇ ಲವಲವಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಯುವ ಪೊಲೀಸ ಸಿಬ್ಬಂದಿಗೆ ಮಾದರಿಯಾದರು ನಗರದ ವಿವಿಧ ವೃತ್ತಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರೋತ್ಸಾಹಿಸುವ ಹಾಗೂ ವಾಹನ ಸಂಚಾರ ನಿರ್ಭಂದಿಸುವ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಮಾರ್ಗದರ್ಶನ ನೀಡುವ ಮೂಲಕ ಕೊನೆಯ ದಿನವೂ ಉತ್ಸಾಹದಿಂದಲೇ ಕಾರ್ಯ ಮಾಡುತ್ತಿರುವುದು ಕಂಡು ಬಂತು.
ದಂಡಗಳ ಸುರಿಮಳೆ
ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳ ತೆರೆಯಲು ಅವಕಾಶವಿಲ್ಲದಿದ್ದರೂ ಕೆಲ ಜೆರಾಕ್ಸ್, ಟೀ ಅಂಗಡಿ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೆ ವ್ಯವಹಾರಕ್ಕೆ ನಿಂತ ಕೆಲ ಅಂಗಡಿಗಳು ಹಾಗೂ ಜನರಮೇಲು ದಂಡ ಹಾಕುವ ಮೂಲಕ ಪೊಲೀಸರು ವಿವಿಧ ಹಂತದ ಕಾರ್ಯಾಚರಣೆ ನಡೆಸಿದರು. ತರಕಾರಿ ಮಾರುಕಟ್ಟೆಯಲ್ಲಿ ಮಕ್ಕಳೊಂದಿಗೆ ಬಂದವರು, ಮಕ್ಕಳನ್ನು ವ್ಯಾಪಾರಕ್ಕೆ ತೊಡಗಿಸಿದವರು ಸಹ ದಂಡಕಟ್ಟುವಂತೆ ಮಾಡಿ ದಂಡದ ಬಿಸಿ ತಾಗಿಸಿದರು.