ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಸಿದ್ದರಾಮಯ್ಯ 


ಸಂಜೆವಾಣಿ ವಾರ್ತೆ
ಕಾರಟಗಿ:ಏ:16: ವಿರೋಧ ಪಕ್ಷದವರು ಎಷ್ಟೇ ಅಪಪ್ರಚಾರ ಮಾಡಿದರು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು,
ಪಟ್ಟಣದ ಪೊಲೀಸ್ ಸ್ಟೇಷನ್ ಎದುರಿಗೆ ಇರುವ ಬಯಲು ಮೈದಾನದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಬಿಜೆಪಿ ಪಕ್ಷದವರು ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಜನರಿಗೆ ಸುಳ್ಳುನ್ನು ಹೇಳಿ ಜನತೆಯ ದಾರಿ ತಪ್ಪಿಸಿ ಅಧಿಕಾರ ಅನುಭವಿಸಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ದ ಕಿಡಿ ಕಾರಿದರು,
ತಮ್ಮ ಅವಧಿಯಲ್ಲಿ ಬಡವರು ಹಸಿವುನಿಂದ ನರಳಬಾರದೆಂದು ಅನ್ನಭಾಗ್ಯ ಯೋಜನೆ, ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ಅಂತರ್ಜಲ ಮಟ್ಟ ಸುಧಾರಿಸಲು ರೈತರ ಹೊಲಗಳಲ್ಲಿ ಕೃಷಿ ಭಾಗ್ಯಯೋಜನೆಯಡಿ ಕೃಷಿ ಹೊಂಡ ನಿರ್ಮಾಣ,
ಪಟ್ಟಣಗಳಲ್ಲಿ ಕೂಲಿ ಕಾರ್ಮಿಕರು ಹೊಟ್ಟೆ ಹಸಿದಾಗ ಕಡಿಮೆ ದರದಲ್ಲಿ ಊಟ ಮಾಡಲು ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿದ್ದೇವೆ,
ಇನ್ನು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ ಆದರೆ ಬಿಜೆಪಿ ಪಕ್ಷದವರು ಹೇಳಿಕೊಳ್ಳುವಂತಹ ಯೋಜನೆಗಳನ್ನು ಮಾಡದೆ ಬರೀ ಸುಳ್ಳುನ್ನೇ ಹೇಳುತ್ತಾ ಕಾಲಹರಣ ಮಾಡಿದ್ದಾರೆ ಎಂದು ತಿಳಿಸಿದರು,
ಬಿಜೆಪಿ ಪಕ್ಷದ ಆಡಳಿತಕ್ಕೆ ರಾಜ್ಯದ ಜನ ರೋಸಿ ಹೋಗಿದ್ದಾರೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಜನರ ಆಶೀರ್ವಾದ ಪಕ್ಷದ ಮೇಲಿದ್ದು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ಬರುತ್ತೆ ಎಂದು ತಿಳಿಸಿದರು,
ಪಿಎಸ್ಐ ಹಗರಣವನ್ನು ವಿಧಾನಸಭೆಯಲ್ಲಿ ಧ್ವನಿ ಎತ್ತ ಬಾರದೆಂದು ಸ್ಥಳೀಯ ಶಾಸಕರ ಬಸವರಾಜ್ ಧಡೇಸೂಗೂರು ತಮ್ಮನ್ನು ಭೇಡಿಕೊಂಡಿದ್ದರು,
ಅದಕ್ಕೆ ತಾವು ಗಮನ ಕೊಡದೆ ತಾವು ಇರೋದು ವಿರೋಧ ಪಕ್ಷದಲ್ಲಿ ಎಂದು ಶಾಸಕರಿಗೆ ತಿಳಿಸಿದ್ದೆ ಎಂದುರು,
ಕ್ಷೇತ್ರದ ಅಭಿವೃದ್ಧಿಗೋಸ್ಕರ ಕನಕಗಿರಿ ಕ್ಷೇತ್ರದ ಮತದಾರರು ಶಿವರಾಜ್ ತಂಗಡಿಗಿಗೆ ಆಶೀರ್ವಾದ ಮಾಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವೇದಿಕೆ ಮುಖಾಂತರ ತಿಳಿಸಿದರು, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಕಾರಟಗಿ ಬ್ಲಾಕ್ ಅಧ್ಯಕ್ಷರು ಶರಣೇಗೌಡ ಮಾಲಿ ಪಾಟೀಲ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಪ್ರಕಾಶ್ ಭಾವಿ,
ಶಿವರೆಡ್ಡಿ ನಾಯಕ, ರಮೇಶ್ ನಾಯಕ ಹುಲಿ ಹೈದರ್, ಶರಣೇಗೌಡ ಕೊಂತನೂರು ಪೊಲೀಸ್ ಪಾಟೀಲ್, ಶರಣಪ್ಪ ಪರಕಿ, ರವಿ ನಂದನ್, ಎಸ್ಟಿ ಘಟಕದ ಕನಕಪ್ಪ ನಾಯಕ್, ಸೋಮನಾಥ್ ದೊಡ್ಮನಿ ಇನ್ನಿತರರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು,