ಮತ್ತಿ ಗ್ರಾಮದಲ್ಲಿ ಕುಡಿಯುವ ನೀರು ಮಾದರಿ ಪರಿಶೀಲನೆ      

ಸಂಜೆವಾಣಿ ವಾರ್ತೆ
     ದಾವಣಗೆರೆ, ಅ. ೧೬: ದಾವಣಗೆರೆ ತಾಲ್ಲೂಕಿನ ಮತ್ತಿ ಗ್ರಾಮದಲ್ಲಿ ಕಲುಷಿತ ಗೊಂಡ ಕುಡಿಯುವ ನೀರಿನ ಪೂರೈಕೆ ವರದಿಗೆ ಸಂಬಂಧಿಸಿದಂತೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮತ್ತು ಸಿಇಓ ಸುರೇಶ್ ಇಟ್ನಾಳ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಕುಡಿಯುವ ನೀರಿನ ಪೈಪ್‍ಲೈನ್ ಪರಿಶೀಲಿಸಿದ ಅವರು ಕುಡಿಯುವ ನೀರಿನ ಪೈಪ್‍ನಿಂದ ಯಾವುದೇ ಕಲುಷಿತ ನೀರು ಪೂರೈಕೆಯಾಗಿರುವುದಿಲ್ಲ. ಕುಡಿಯುವ ನೀರಿನ ಪೈಪ್‍ಲೈನ್‍ಗೆ ಚರಂಡಿ  ಪೈಪ್‍ನಿಂದ ಯಾವುದೇ ಕಲುಷಿತ ನೀರು ಪೂರೈಕೆಯಾಗಿರುವುದಿಲ್ಲ. ಚರಂಡಿ ಇರುವುದಕ್ಕಿಂತ ಆಳವಾಗಿರುತ್ತದೆ.
   ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ  ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದ್ದು ಈಗಾಲೇ ಶೇ.80ರಷ್ಟು ಮುಕ್ತವಾಗಿರುತ್ತದೆ. ಇದೇ ಜೆ.ಜೆ.ಎಂ ಪೈಪ್‍ಲೈನ್ ಮೂಲಕವೇ ವಾರದಲ್ಲಿ  ಕುಡಿಯುವ ನೀರು ಪೂರೈಕೆ ಮಾಡಲು ಸಿಇಒ ಅವರು ಸೂಚನೆ ನೀಡಿದರು.ಗ್ರಾಮದಲ್ಲಿನ ಚರಂಡಿ, ಸ್ವಚ್ಚತೆ ಮತ್ತು ಗ್ರಾಮದ ಸ್ವಚ್ಚತೆ ಕೈಗೊಳ್ಳಲು ಸೂಚನೆ ನೀಡಿದ ಅವರು ಗ್ರಾಮದ À ನೈರ್ಮಲ್ಯವನ್ನು ಕಾಪಾಡಿ ಕೊಳ್ಳಲು ಪಂಚಾಯಿತಿ  ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಗ್ರಾಮದಲ್ಲಿ ಯಾವುದೇ ಕಲುಷಿತ ನೀರು ಪೂರೈಕೆಯಾಗಿರುವುದಿಲ್ಲ  ಎಂದು ಸ್ಪಷ್ಟಪಡಿಸಿದರು.