ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಸಣ್ಣ ಹೊನ್ನಪ್ಪ ಉಪಾಧ್ಯಕ್ಷರಾಗಿ ಕೊಟ್ರಮ್ಮ ಆಯ್ಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.09:-ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನೆಡೆದ ಚುನಾವಣೆಯಲ್ಲಿ ನೂತನ  ಅಧ್ಯಕ್ಷರಾಗಿ ಸಣ್ಣ ಹೊನ್ನಪ್ಪ ಉಪಾಧ್ಯಕ್ಷರಾಗಿ  ಶ್ರೀ ಮತಿ ಕೊಟ್ರಮ್ಮ ಅವರು ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.
ಪಂಚಾಯತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ  ಪರಿಶಿಷ್ಟ ಜಾತಿಯ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು ಎಸ್ ಸಣ್ಣಹೋನ್ನಪ್ಪ 13 ಮತಗಳ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಸಾಮಾನ್ಯ ಮೀಸಲಾತಿಗೆ ಮಹಿಳೆ ಅಭ್ಯರ್ಥಿಯಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು ಅದರಲ್ಲಿ ಶ್ರೀ ಮತಿ ಕೊಟ್ರಮ್ಮ 15 ಮತಗಳ ಬಲದೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು  ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ್ದ ಸತೀಶ್ ಪಾಟೀಲ್  ಅವರು   ಘೋಷಿಸಿದರು.
ಈ ಸಂದರ್ಭದಲ್ಲಿ ಮತ್ತಿಹಳ್ಳಿ ಕಾಂಗ್ರೆಸ್ ಪಕ್ಷದ  ಹಿರಿಯ ಮುಖಂಡರಾದ ಕೊಟ್ರು ಗೌಡ್ರು, ಕೆಂಚನ ಗೌಡ್ರು,ಶ್ರಾವಣ ಗೌಡ್ರು,ಮೈದೂರು ರಾಮಣ್ಣ, ಐ ಬಸವರಾಜಪ್ಪ, ದೇವೇಂದ್ರಪ್ಪ,ಮತ್ತಿಹಳ್ಳಿ ಬೆಟ್ಟನ ಗೌಡ, ಕೋಟೆಪ್ಪ, ಹನುಮಂತಪ್ಪ ಕೆ ಸಣ್ಣ ನಿಂಗಪ್ಪ, ಎಸ್ ಸಣ್ಣನಿಂಗಪ್ಪ, , ಎಸ್ ರಮೇಶ್,ಸಂತೋಷ್,, ಎಚ್ ಬಸವರಾಜ,ಬೆಣ್ಣಿ ಕೆಂಚಪ್ಪ,ಗೊರಜಪ್ಪ,ಸುರೇಶ,ದುರಗಪ್ಪ,ಕರಿಬಸಪ್ಪ, ಬಿ ಆರ್ ರಾಮನಗೌಡ,ನಾಗರಾಜ್,ಮಾರುತಿ ವಕೀಲರು ಯುವ ಕಾಂಗ್ರೆಸ್ ಮುಖಂಡ ಕರಿಬಸಪ್ಪ,ವಿರುಪಾಕ್ಷಪ್ಪ,, ಚೌಡಪ್ಪ,ದೊಡ್ಡಬಸಪ್ಪ,ಉಪಸ್ಥಿತರಿದ್ದರು