ಮತ್ತಿಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

ಹರಪನಹಳ್ಳಿ.ಡಿ.೨೮; ತಾಲ್ಲೂಕಿನಾದ್ಯಾಂತ ನಿನ್ನೆ ನಡೆದ ಎರಡನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ಒಟ್ಟು 19 ಸದಸ್ಯ ಸ್ಥಾನಗಳಿದ್ದು, ಇದರಲ್ಲಿ 11 ಸ್ಥಾನ ಮತ್ತಿಹಳ್ಳಿ ಗ್ರಾಮದಲ್ಲಿವೆ. ಇಲ್ಲಿ 1ರಿಂದ 4 ವಾರ್ಡ್ಗಳಿದ್ದು, ಇರದಲ್ಲಿ 3 ಮತ್ತು 4ನೇ ವಾರ್ಡ್ಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಹೆಸರು ಬದಲಾಗಿ 3ರಲ್ಲಿ ಸ್ಪರ್ಧೆ ಮಾಡಿರುವ 10 ಅಭ್ಯರ್ಥಿಗಳ ಹೆಸರು 4ನೇ ವಾರ್ಡ್ ಬ್ಯಾಲೆಟ್‌ನಲ್ಲಿ, 4ನೇ ವಾರ್ಡ್ನ 7 ಜನ ಅಭ್ಯರ್ಥಿಗಳ ಹೆಸರು 3ನೇ ವಾರ್ಡ್ನ ಬ್ಯಾಲೆಟ್ ಪತ್ರದಲ್ಲಿ ಮುದ್ರಿತವಾಗಿದೆ. ನಾವು ಪ್ರಚಾರ ನಡೆಸಿರುವ ವಾರ್ಡ್ ಬದಲು ಬೇರೆ ವಾರ್ಡ್ನ ಬ್ಯಾಲೆಟ್‌ನಲ್ಲಿ ನಮ್ಮ ಹೆಸರು ಮುದ್ರಿತವಾಗಿರುವುದರಿಂದ ನಾವು ಹಕ್ಕು ಚಲಾಯಿಸುವುದಿಲ್ಲ ಎಂದು ಅಭ್ಯರ್ಥಿಗಳ ಸಹಿತ ಗ್ರಾಮಸ್ಥರಾದ ಕೋಟ್ರಗೌಡ, ಮತ್ತಿಹಳ್ಳಿ ರಾಮಣ್ಣ, ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಹಳೇ ಗ್ರಾಮ ಪಂಚಾಯತಿ ಕಾರ್ಯಾಲಯಲ್ಲಿ 4ನೇ ವಾರ್ಡ್ನ 1058 ಮತದಾರರಿಗೆ ಹಾಗೂ ಪ್ರಾಥಮಿಕ ಶಾಲೆ ಆವರಣದಲ್ಲಿ 3ನೇ ವಾರ್ಡ್ನ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆ ಸ್ಥಾಪಿಸಲಾಗಿತ್ತು. ಆದರೆ ಮತಗಟ್ಟೆ ಬಳಿ ಅಭ್ಯರ್ಥಿಗಳ ಹೆಸರಿನ ಪಟ್ಟಿ ಪ್ರಕಟಿಸಿರುವುದನ್ನು ಅರಿತ ಅಭ್ಯರ್ಥಿಗಳು ಚುನಾವಣಾದಿಕಾರಿಗಳ ಬಳಿ ಪ್ರಶ್ನಿಸಿದರು. ನೀವು ನಾಮಪತ್ರ ಸಲ್ಲಿಕೆಯಂತೆ ಬ್ಯಾಲೆಟ್ ನಮೂದಿಸಲಾಗಿದೆ ಎಂದು ಮತಗಟ್ಟೆ ಅದಿಕಾರಿಗಳ ಉತ್ತರಿಸುತ್ತಿದ್ದಂತೆ ಅದಿಕಾರಿಗಳ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು. ಮತದಾನ ಬಹಿಷ್ಕಾರ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾದಿಕಾರಿ ವಿ.ಕೆ.ಪ್ರಸನ್ನಕುಮಾರ್ ಮತ್ತು ತಹಶೀಲ್ದಾರ್ ಎಂ.ಎಲ್.ನಂದೀಶ್ ಅವರು ಮತದಾರರ ಪರಿಷ್ಕರಣೆ ಪಟ್ಟಿ ಹಾಗೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಂತೆ ಬ್ಯಾಲೆಟ್ ನಮೂದಾಗಿದೆ ಎಂದು ಸಮರ್ಥಿಸಿಕೊಂಡರು. ಮತದಾರರ ಪಟ್ಟಿಯಲ್ಲಿ ಲೋಪವಾಗಿದೆ. ನಾವು ಪ್ರಚಾರ ಮಾಡಿರುವ ವಾರ್ಡ್ ಬದಲು ಬೇರೆ ವಾರ್ಡ್ನ ಜನರು ಬಂದು ಮತದಾನ ಮಾಡಿ ಅಂದ್ರೆ ಹೇಗೆ? ಲೋಪದೋಷ ಸರಿಪಡಿಸುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಅಭ್ಯರ್ಥಿಗಳು ಮತ್ತು ಗ್ರಾಮಸ್ಥರು ಪಟ್ಟುಹಿಡಿದರು.  ಅಪರ ಜಿಲ್ಲಾದಿಕಾರಿ ಮಂಜುನಾಥ ಅವರು ಗ್ರಾಮಕ್ಕೆ ಆಗಮಿಸಿ ಅಭ್ಯರ್ಥಿಗಳು ಮತ್ತು ಮತದಾರ ಮನವೊಲಿಸಲಯ ಯತ್ನಿಸಿದರು. ಗ್ರಾ.ಪಂ ಚುನಾವಣೆಗೆ ಪರಿಷ್ಕತ ಮತದಾರರ ಪಟ್ಟಿ ಪ್ರಕಾರವೇ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಪಟ್ಟಿ ಮೇಲೆ ಅಲ್ಲ, ಇಡೀ ಜಿಲ್ಲೆಯ ಜನರಿಗೆ ಮೊದಲಿಗೆ ಪರಿಷ್ಕೃತ ಪಟ್ಟಿ ಸಿಕ್ಕಿದೆ, ನಿಮಗೆ ಏಕೆ ಸಿಕ್ಕಿಲ್ಲ? ಲೋಪದೋಷವಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿತ್ತು ಏಕೆ ಸಲ್ಲಿಸಲಿಲ್ಲ? ಅಭ್ಯರ್ಥಿಗಳು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು, ಮತದಾನ ನಿಮ್ಮ ಹಕ್ಕು ಮತ ಚಲಾಯಿಸಿ ಎಂದು ಅಪರ ಜಿಲ್ಲಾದಿಕಾರಿ ಮಂಜುನಾಥ ಮನವಿ ಮಾಡಿಕೊಂಡರು ಗ್ರಾಮಸ್ಥರು ಮಣಿಯಲಿಲ್ಲ. ವಾರ್ಡ್ ನಂ-3ರಲ್ಲಿ 3 ಮತ್ತು ವಾರ್ಡ್ ನಂ.4ರಲ್ಲಿ 4 ಸೇರೊಇ ಒಟ್ಟು 7 ಪೋಸ್ಟಲ್ ಬ್ಯಾಲೆಟ್ ವಿತರಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಎಲ್.ನಂದೀಶ್ ತಿಳಿಸಿದರು. ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್, ತಹಶೀಲ್ದಾರ್ ಎಂ.ಎಲ್.ನಂದೀಶ್, ಸಿಪಿಐ ಕೆ.ಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸೈದುಲು ಅಡಾವತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಬಾಕ್ಸ್ಯಾವುದೇ ಲೋಪದೋಷವಾಗಿಲ್ಲ
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಪ್ರಕಾರವೇ ಬ್ಯಾಲೆಟ್ ಪತ್ರ ನಮೂದಾಗಿವೆ, ಇಲ್ಲಿ ಅದಿಕಾರಿಗಳಿಂದ ಯಾವುದೇ ಲೋಪದೋಷ ಉಂಟಾಗಿಲ್ಲ, ಅಭ್ಯರ್ಥಿಗಳು ಸರಿಯಾದ ಮಾಹಿತಿ ಪಡೆದುಕೋಳ್ಳದೇ ಪ್ರಚಾರ ನಡೆಸಿರುವುದು ಕಂಡು ಬಂದಿರುತ್ತದೆ. ಇದಕ್ಕೂ ನಮಗೂ ಸಂಬಂಧವಿಲ್ಲ, ಹಕ್ಕು ಚಲಾಯಿಸುವಂತೆ ಮತದಾರರರಲ್ಲಿ ಮನವಿ ಮಾಡಿದ್ದೇವೆ.

 -ಮಂಜುನಾಥ, ಅಪರ ಜಿಲ್ಲಾದಿಕಾರಿ