ಮತ್ತಿಮೂಡ: ಸಿಡಿಲು ಬಡಿದು ರೈತ ಸಾವು

ಚಿತ್ತಾಪೂರ: ಎ.26:ಪಟ್ಟಣ ಸೇರಿದಂತೆ ತಾಲ್ಲೂಕಿನ
ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಾಯಂಕಾಲ ಗುಡುಗು, ಸಿಡಿಲು ಸಹಿತ ಜೋರು ಮಳೆಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಿಡಿಲಿಗೆ ಬಲಿಯಾಗಿದ್ದಾರೆ.

ತಾಲ್ಲೂಕಿನ ಮತ್ತಿಮೂಡ ಗ್ರಾಮದ ಯಳ್ವಂತರಾಯ ತಂದೆ ಶಿವರಾಯ ತಳವಾರ (52) ಹೊಲದಲ್ಲಿ ಕೆಲಸ ಮಾಡಿ ಬರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹೊತ್ತಿಗೆ ಗಾಳಿ, ದೂಳಿ,ಸಿಡಿಲು, ಮಿಂಚು ಜೋರಾಗಿತ್ತು. ಮಳೆ 5 ಗಂಟೆಗೆ ಆರಂಭವಾಗಿ ಸುಮಾರು 15 ನಿಮಿಷ ರಭಸವಾಗಿ ಸುರಿಯಿತು.

ಇವರಿಗೆ ಒಬ್ಬ ಮಗ ಹಾಗೂ ಇಬ್ಬರು ಪುತ್ರಿಯರು ಇದ್ದು. ಅಂತ್ಯಕ್ರಿಯೆ ಇಂದು ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ.

ಈ ಕುರಿತ್ತು ಮಾಡಬೂಳ ಪೆÇೀಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಸಂಬಂಧಪಟ್ಟ ಇಲಾಖೆ ಆಗಮಿಸಿ ಪಂಚನಾಮೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ