ಮತ್ತಿಮಡು ಹಾಗೂ ಇಂಗನಕಲ್ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಓಡಿಸಿ

ಕಲಬುರಗಿ:ಜೂ.24: ಚಿತ್ತಾಪೂರ ತಾಲೂಕಿನ ಮತ್ತಿಮಡು ಹಾಗೂ ಇಂಗನಕಲ ಗ್ರಾಮಕ್ಕೆ ಸಮರ್ಪಕ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಬಿಜೆಪಿ ಮುಖಂಡ ಗುಂಡು ಮತ್ತಿಮಡು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮತ್ತಿಮಡು ಹಾಗೂ ಇಂಗನಕಲ ಗ್ರಾಮದಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‍ಪಾಸ್ ಸೌಲಭ್ಯ ಹೊಂದಿದ್ದಾರೆ.ಆದರೆ, ಈ ಗ್ರಾಮಗಳಿಗೆ ಒಂದೇ ಒಂದು ಬಸ್ಸು ಸಹ ಓಡಾಡುವುದಿಲ್ಲ.ಪ್ರತಿದಿನ ವಿದ್ಯಾಭ್ಯಾಸ ಕ್ಕೆಂದು ಮಾಡಬೂಳ ಹಾಗೂ ಕಲಬುರಗಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‍ಗಾಗಿ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅವರ ಸಂಖ್ಯೆಗನುಗುಣವಾಗಿ ಮತ್ತಿಮಡು ಹಾಗೂ ಇಂಗನಕಲ್ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಮತ್ತಿಮಡು ಹಾಗೂ ಇಂಗನಕಲ್ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ ಸಹ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಒಂದೇ ಬಸ್‍ನಲ್ಲಿ ಬಿಟ್ಟರು ನೂರಾರು ವಿದ್ಯಾರ್ಥಿಗಳು ಸಹ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಬಸ್‍ಪಾಸ್ ಇದ್ದರೂ, ಖಾಸಗಿ ಆಟೋಗಳಲ್ಲಿ ಹಣ ನೀಡಿ ಪ್ರಯಾಣಿಸಬೇಕಾಗಿದೆ.ಆದ್ದರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮತ್ತಿಮಡು ಗ್ರಾಮದಿಂದ ಇಂಗನಕಲ್ ಗೆ, ಎರಡು ಬಸ್ ಮತ್ತು ಮಧ್ಯಾಹ್ನ 2 ಗಂಟೆಗೆ, ಸಂಜೆ 4 ಗಂಟೆಗೆ ಕಲಬುರಗಿಯಿಂದ ಬಸ್‍ನ್ನು ಓಡಿಸಬೇಕು ಎಂದು ಅವರು ಒತ್ತಾಯಿಸಿದರು.