ಮತ್ತಿಗಟ್ಟೆ ಗ್ರಾಮದಲ್ಲಿ ಹತ್ತಿತಳಿಯ ಕ್ಷೇತ್ರೋತ್ಸವ

ಜಗಳೂರು.ಸೆ.೨೦;  ತಾಲೂಕಿನಮತ್ತಿಗಟ್ಟೆಹಳ್ಳಿ ಯಲ್ಲಿ ಅಜಿತ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ರೈತರಿಗೆ ಅಜಿತ್ 155 ಬಿಟಿ ಹತ್ತಿ ತಳಿಯ ಕ್ಷೇತ್ರೋತ್ಸವ ವನ್ನು ಏರ್ಪಡಿಸಲಾಗಿತ್ತು. 
ಈ ಕಾರ್ಯಕ್ರಮಕ್ಕೆ ಅಸಗೋಡು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು. ಅಜಿತ್ 155 ಹತ್ತಿ ತಳಿಯಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಿಗೆ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಅಧಿಕ ಇಳುವರಿ ಕೊಡುವಂತಹ ತಳಿಯಾಗಿದೆ ಎಂದು ಕಂಪನಿಯ ಏರಿಯಾ ಮ್ಯಾನೇಜರ್ ರುದ್ರೇಶ್ ಅವರು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿಗಳಾದ ಹನುಮಂತ, ದತ್ತಾತ್ರೇಯ ಮತ್ತು ವಿತರಕರಾದ ಶಂಭುಲಿಂಗಪ್ಪ ಅವರು ಭಾಗಹಿಸಿದ್ದರು