ಮತೀಯ ಶಕ್ತಿ ಪೆÇೀಷಿಸುವ ಕಾಂಗ್ರೆಸ್ ವಿರುದ್ಧ ಜನತೆ ನಿರ್ಧಾರ

ಸಂಜೆವಾಣಿ ನ್ಯೂಸ್
ಮೈಸೂರು:ಏ.21:- ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ಸುವ್ಯವಸ್ಧೆ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರದಿಂದ ಮತೀಯ ಶಕ್ತಿಗಳನ್ನ ಪೆÇೀಷಿಸುವ ಕೆಲಸ ಆಗುತ್ತಿದ್ದು, ಇದರ ವಿರುದ್ಧ ಮೈಸೂರು ಚಾಮರಾಜನಗರ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್, ಮತೀಯ ಶಕ್ತಿಗಳನ್ನ ಪೆÇೀಷಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಮತೀಯ ಶಕ್ತಿಗಳ ದೌರ್ಜನ್ಯ ಹೆಚ್ಚಾಗಿದೆ. ಹಿಂದೂಗಳಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಟೂಲ್ ಕಿಟ್ ಗಳು ಕೆಲಸ ಮಾಡುತ್ತಿವೆ. ಹನುಮಾನ್ ಚಾಲೀಸ್ ಹೇಳಿದವರ ಮೇಲೆ ಹಲ್ಲೆ ನಡೆಯುತ್ತಿವೆ. ಜೈ ಶ್ರೀರಾಮ್ ಎಂದರೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಗೆ ಸರ್ಕಾರ ನೇರ ಹೊಣೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಇವರನ್ನ ಪೆÇೀಷಿಸುವ ಕೆಲಸ ಮಾಡುತ್ತಿದ್ದಾರೆ. ಬಾಂಬ್ ಸ್ಫೋಟ ಮಾಡಿದವರನ್ನ ನಮ್ಮ ಬ್ರದರ್ಸ್ ಅನ್ನುತ್ತಾರೆ. ನೇಹಾ ಪ್ರಕರಣದಲ್ಲಿ ಜಿಹಾದಿ ಪ್ರಕರಣ ಅಲ್ಲ ಎಂದು ಸಿಎಂ ಹೇಳುತ್ತಾರೆ. ಹಿಂದೂಗಳಲ್ಲಿ ಭಯ ಮೂಡಿಸಬೇಕು, ಭಯದಿಂದ ಬದುಕುವ ನಿರ್ಮಾಣ ಮಾಡುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ವಕ್ತಾರ ಮೋಹನ್ ಕುಮಾರ್, ನಗರ ಮಾದ್ಯಮ ಸಂಚಾಲಕ, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್ ಇದ್ದರು.