ಮತಿಭ್ರಮಣೆಯಿಂದ ಇತರೆ ಧರ್ಮವನ್ನು ದ್ವೇಷಿಸುತ್ತಾರೆ

ಮಾನ್ವಿ.ಅ.೧೭-ತಮ್ಮ ಧರ್ಮವನ್ನು ನೈಜವಾಗಿ ಅರಿತುಕೊಂಡವರು ಖಂಡಿತವಾಗಿ ಇತರೆ ಧರ್ಮವನ್ನು ದ್ವೇಷಿಸುವುದಿಲ್ಲ ಕೆಲವರು ಮಾತ್ರ ತಮ್ಮ ವೈಯಕ್ತಿಕ ಹಿತಾಸಕ್ತಿ ಅಥವಾ ಜಾತಿ ರಾಜಕೀಯ ಮಾಡಿ ಲಾಭ ಪಡೆಯುವುದಕ್ಕೆ ಮಾಡುತ್ತಾರೆ ಇದನ್ನು ಅರಿಯದ ಇಂದಿನ ಯುವಕರು ದ್ವೇಷಕ್ಕೆ ಮುನ್ನುಡಿಯಾಗಿ ಬಲಿಯಾಗುತ್ತಾರೆ ಇದನ್ನು ಮುಂದುವರೆಸಿಕೊಂಡು ಹೋಗುವವರಿಗೆ ಖಂಡಿತವಾಗಿ ಮತಿಭ್ರಮಣೆಯಾಗಿರುತ್ತದೆ ಎಂದು ಚಿಂತಕ ಬರಹಗಾರ ಯೋಗೇಶ ಮಾಸ್ಟರ್ ಬೆಂಗಳೂರು ಹೇಳಿದರು.
ಪಟ್ಟಣದ ಜಮಾತೆ ಇಸ್ಲಾಂ ಹಿಂದ್ ವತಿಯಿಂದ ನಗರದ ಈದ್ಗಾ ಸಭಾಂಗಣದಲ್ಲಿ ನಡೆದ ಸೀರತ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ಈ ಧರ್ಮದ ಹೆಸರಲ್ಲಿ ಇಂದಿನ ಯುವ ಸಮೂಹಕ್ಕೆ ಶಿಕ್ಷಣದ ಬದಲಾಗಿ ಧರ್ಮದ ದ್ವೇಷವನ್ನು ತುಂಬುವುದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದರು.
ದೇಶದ ಸಮಾನತೆಯ ಸಮಾಜದ ನಿರ್ಮಾಣದಲ್ಲಿ ಇಂದಿನ ಜನಗಳ ಪಾತ್ರವೇನು ಎನ್ನುವ ಶೀರ್ಷಿಕೆಯ ವಿಚಾರ ಗೋಷ್ಠಿಯಲ್ಲಿ ಪ್ರಾಸ್ತಾವಿಕವಾಗಿ ಜೀಶಾನ್ ಮಾತನಾಡಿದರು ನಂತರ ಡಾ ಬಸವಪ್ರಭು ಪಾಟೀಲ, ಉಪನ್ಯಾಸಕ ಬಸವರಾಜ ಬೋಗವತಿ, ಶಾಸಕ ಜಿ ಹಂಪಯ್ಯ ನಾಯಕ, ಮಾತನಾಡಿ ಸರ್ವ ಧರ್ಮಗಳಿಂದ ಕೂಡಿದ ನಮ್ಮ ದೇಶ ಶಾಂತಿ ಸೌಹಾರ್ದದಿಂದ ಮುನ್ನಡೆಯುತ್ತಿದೆ ಇನ್ನೂ ಮುನ್ನಡೆಯಬೇಕಾದಲ್ಲಿ ಇಂದಿನ ಮಕ್ಕಳಿಗೆ ಶಿಕ್ಷಣದ ದಾರಿಯಡಿಯಲ್ಲಿ ಸಾಗುವಂತೆ ಪ್ರೋತ್ಸಾಹ ನೀಡಬೇಕು ಇಲ್ಲವಾದಲ್ಲಿ ದೇಶದ ಪರಿಸ್ಥಿತಿ ತುಂಬಾ ಜಟಿಲವಾಗುತ್ತದೆ ಎಂದರು.. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧಾರವಾಡದ ಶಾಂತಿ ಪ್ರಕಾಶನದ ಸಂಚಾಲಕ ಮೊಹಮ್ಮದ್ ಕುನ್ನಿ ಮಾತಾನಾಡಿ ಸರ್ವಧರ್ಮದ ಜನರು ಸೌಹಾರ್ದತೆ ಸಹಬಾಳ್ವೆಯಿಂದ ಜೀವಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಗಫೂರ್ ಸಾಬ್ ಅಧ್ಯಕ್ಷರು ಈದ್ಗಾ ಕಮಿಟಿ, ಸೈಯ್ಯದ್ ಅಕ್ಬರ್ ಪಾಶ ಅಧ್ಯಕ್ಷರು ರಾಬಿತ ಎ ಮಿಲ್ಲತ್, ಅನ್ವರ್ ಪಾಶ ಉಮ್ರಿ ವಲಯ ಸಂಚಾಲಕರು ಜಮಾತ್ ಎ ಇಸ್ಲಾಮಿ, ಅಬ್ದುರ್ ರಹಮಾನ್ ಅಧ್ಯಕ್ಶರು ಜಮಾತ್ ಎ ಇಸ್ಲಾಮಿ, ನಾಗಲಾಂಭಿಕ ಸಹಕಾರಿಯ ನಾಗರತ್ನ ಪಾಟೀಲ್, ಸೈಯದಾ ನುಸ್ರತ್ ಜಹಾ, ಜಿಲ್ಲಾ ಮಹಿಳಾ ಸಂಚಾಲಕರು ಜೆಐಎಚ್ ರಾಯಚೂರು. ಹಾಗೂ ಎಂಎಎಚ್ ಮುಖೀಂ, ಉಮರ್ ದೇವರಮನಿ ಸೇರಿದಂತೆ ನೂರಾರು ಜನರು ಇದ್ದರು.