ಮತಾಂತರ ನಿಷೇಧ ಮಸೂದೆಗೆ ಕ್ರೆöÊಸ್ತರ ವಿರೋಧದಾವಣಗೆರೆ,ನ.೨೩ : ಮತಾಂತರ ನಿಷೇಧ ಮಸೂದೆ ವಿರೋಧಿಸಿ ಹಾಗೂ ಚರ್ಚ್ಗಳಿಗೆ ಹಿಂದು ಪರ ಸಂಘಟನೆಗಳ ಅಕ್ರಮ ಪ್ರವೇಶ ಖಂಡಿಸಿ ಜಿಲಾ ಕ್ರಿಶ್ಚಿಯನ್ ವೆಲ್‌ಫೇರ್ ಅಸೋಷಿಯೇಷನ್‌ಯಿಂದ ನಗರದಲ್ಲಿ ಇಂದು ಪ್ರತಿಭಟನಾ ಧರಣಿ ನಡೆಸಲಾಯಿತು.ನಗರದ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದ ಕ್ರೆöÊಸ್ತರು, ರಾಜ್ಯ ಸರ್ಕಾರ ಸದನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಿ ಕಾನೂನು ಜಾರಿ ಮಾಡಲು ಹೊರಟಿರುವುದನ್ನು ಹಾಗೂ ರಾಜ್ಯದ ವಿವಿಧ ಚರ್ಚ್ಗಳಿಗೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡುತ್ತಿರುವುದನ್ನು ಖಂಡಿಸಿ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕ್ರೆöÊಸ್ತ ಮುಖಂಡರು, ವಿಧಾನಸಭೆ ಅಧಿವೇಶನದಲ್ಲಿ ಗೂಳಿಹಟ್ಟಿ ಶೇಖರ್ ಕ್ರೆöÊಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದು ಇದನ್ನು ತಡೆಯಲು ಹೋದವರ ಮೇಲೆ ಜಾತಿ ನಿಂದನೆ, ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಕ್ರೆöÊಸ್ತ ಸಮುದಾಯದವರಿಗೆ ಅಘಾತ ಉಂಟು ಮಾಡಿದೆ. ಶಾಸಕರು ಈ ರೀತಿ ಹೇಳಿಕೆ ನೀಡಿ ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿ ಶಾಂತಿ ಕದಡಲು ಪ್ರಯತ್ನಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಂತಿಪ್ರಿಯರಾದ ಕ್ರೆöÊಸ್ತರು ಯಾರನ್ನೂ ಬಲವಂತವಾಗಿ ಮತಾಂತರ ಮಾಡಿಲ್ಲ. ಈ ನೆಲದ ಕಾನೂನಿನಂತೆ ಬದುಕುತ್ತಿರುವ ಕ್ರೆöÊಸ್ತರು ಯಾವುದೇ ಅನ್ಯ ಧರ್ಮಿಯರ ಮೇಲೆ ದಾಳಿ ನಡೆಸಿರುವ ಪುರಾವೆಗಳಿಲ್ಲ. ಆದರೂ ನಮ್ಮ ಮೇಲೆ ಕೆಲವರು ಅನಗತ್ಯವಾಗಿ ಸುಳ್ಳು ಆಪಾದನೆ ಮಾಡುತ್ತಿರುವುದು ಸರಿಯಲ್ಲ. ಆದರೂ ರಾಜ್ಯ ಸರ್ಕಾರ ಅಧಿಕೃತ ಹಾಗೂ ಅನಧಿಕೃತ ಚರ್ಚ್ಗಳ ದಾಖಲೆಗಳನ್ನು ಸರ್ವೇ ಮಾಡಲು ಸಮಿತಿ ರಚಿಸಿದರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಸರ್ಕಾರದ ಈ ಅವೈಜ್ಞಾನಿಕ ಅದೇಶವನ್ನು ನೆಪವಾಗಿಸಿಕೊಂಡು ಅನೇಕ ಹಿಂದುಪರ ಸಂಘಟನೆಗಳು ಉದ್ದೇಶಪೂರ್ವಕವಾಗಿ ಕ್ರೆöÊಸ್ತ ಸಮುದಾಯದ ಪ್ರಾರ್ಥನ ಮಂದಿರ ಮತ್ತು ಪಾರ್ದಿಗಳ ಮೇಲೆ ಹಲ್ಲೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿವೆ. ಅದ್ದರಿಂದ ರಾಜ್ಯ ಸರ್ಕಾರ ಸದನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಿ ಕಾನೂನು ಜಾರಿಗೊಳಿಸಬಾರದು ಮತ್ತು ಚರ್ಚ್ಗಳಿಗೆ ಅಕ್ರಮ ಪ್ರವೇಶ ಮಾಡಿ ಪುಂಡಾಟಿಕೆ ಮೆರೆಯುವ ಹಿಂದು ಪರ ಸಂಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಫಾದರ್ ಡಾ. ಅಂತೋಣಿ ಪೀಟರ್, ಫಾಸ್ಟರ್ ಪ್ರೇಮ್ ಕುಮಾರ್, ರಾಜಶೇಖರ್, ಇಮ್ಯಾನುವೆಲ್, ಕರುಣಾಕರನ್, ಜೈ ಕುಮಾರ್, ಚಂದ್ರು ಸೇರಿದಂತೆ ನೂರಾರು ಜನ ಕ್ರೆöÊಸ್ತರು ಭಾಗವಹಿಸಿದ್ದರು.

 

Attachments areaReplyReply to allForward