ಕಲಬುರಗಿ:ಜೂ.24: ಸರಕಾರ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಹೊರಟಿರುವದು ಖಂಡನೀಯವಾಗಿದೆ ಎಂದು ಬಿಜೆಪಿ ಮುಖಂಡ ಆನಂದ ತೆಗನೂರ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಹಿಂದಿನ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಿತ್ತು. ಆದರೆ ಅದನ್ನು ಹಿಂಪಡೆಯುವ ರಾಜ್ಯ ಸರಕಾರ ದುಸ್ಸಾಹಸ ಮಾಡಬಾರದು,ಭಾರತವು ಹಿಂದೂ ರಾಷ್ಟ್ರವಾಗಿದ್ದು ಹಿಂದೂಗಳೊಡನೆ ಅನ್ಯ ಧಮೀಯರು ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ.ಅದರಂತೆ ಕರ್ನಾಟಕದಲ್ಲಿಯೂ ಸಹ ಅನ್ಯ ಧರ್ಮೀಯರು ಸಹ ತಮ್ಮ ಧರ್ಮದ ಆಚರಣೆ ಮಾಡಲು ಅವಕಾಶವಿದೆ.ಇದನ್ನು ನಾವು ಒಪ್ಪುತ್ತೆವೆ ಆದರೆ ಹಿಂದೂಗಳನ್ನು ಮರಳು ಮಾಡಿ ಅವರಿಗೆ ಆಮೀಶ ತೋರಿಸಿ ಬಲವಂತವಾಗಿ ಮತಾಂತರಿಸುವುದನ್ನು ಖಂಡಿಸುತ್ತೇವೆ.ಹಿಂದೂಗಳನ್ನ ಮತಾಂತರದಿಂದ ರಕ್ಷಿಸಿ ಧರ್ಮ ಕಾಪಾಡುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ.ಹಿಂದೂಗಳ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ ಎಂದರು.