ಮತಾಂತರ ನಿಷೇಧ ಕಾಯ್ದೆ ಜಾರಿಗೆ ಶೋಭ ಒತ್ತಾಯ

ಚಿಕ್ಕಮಗಳೂರು.ನ೪: ಲವ್ ಜಿಹಾದ್ ಕೇವಲ ಪ್ರೀತಿ, ಪ್ರೇಮ, ಮದುವೆಗೆ ಸೀಮಿತವಗಿಲ್ಲ ಲವ್ ಜಿಹಾದ್ ಭಯೋತ್ಪಾದನೆಯ ಇನ್ನೊಂದು ಮುಖ ಎಂದು ಗಂಭೀರ ಆರೋಪ ಮಾಡಿರುವ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೂಡಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಕೇವಲ ಪ್ರೀತಿ, ಪ್ರೇಮ, ಮದುವೆಗೆ ಮಾತ್ರ ಉಳಿದಿಲ್ಲ. ಭಯೋತ್ಪಾದನೆಯ ಮತ್ತೊಂದು ಮುಖವಾಗಿದೆ. ಇದು ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ಷಡ್ಯಂತ್ರವಾಗಿದೆ ಎಂದು ಗಂಬಿ. ಓವೈಸಿಯಂತಹ ಕೋಮುವಾದಿಗಳು ಬಹಿರಂಗವಾಗಿ ಮಾತನಾಡುವುದು ಆರಂಭವಾಗಿದೆ ಎಂದರು. ಇನ್ನೂ ಉಡುಪಿಯಲ್ಲಿ ೧೭ ವರ್ಷದ ಯುವತಿಯೊಂದಿಗೆ ಯುವಕ ನಾಪತ್ತೆಯಾಗಿದ್ದಾನೆ. ಮೊಬೈಲ್ ಬಿಟ್ಟು ಹೋಗಬೇಕು, ಯಾವ ಕಾರು-ಬೈಕ್‌ನಲ್ಲಿ ಹೋಗಬೇಕೆಂಬ ಷಡ್ಯಂತ್ರ ಮೊದಲೇ ನಿರ್ಧಾರವಾಗಿತ್ತು. ಎಂದು ಆರೋಪ ಮಾಡಿದರು.ಸಂಸದೆ ಶೋಭಾ ಕರಂದ್ಲಾಜೆಲವ್ ಜಿಹಾದ್ ಕುರಿತು ಸುದ್ದಿಗಾರರೊಂದಿಗೆ ಮಾತಾನಾಡಿದ್ದಾರೆ.
ಚಿಕ್ಕ ಹೆಣ್ಣು ಮಕ್ಕಳಿಗೆ ಹಣದ ಆಮಿಷ ತೋರಿಸಿ ಸಮಾಜ ಪರಿವರ್ತನೆಯ ಷಡ್ಯಂತ್ರ ನಡೆಯುತ್ತಿದೆ. ಕೂಡಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.