ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರದಂತೆ ಮನವಿ

ದಾವಣಗೆರೆ. ನ.೨೦; ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ವೆಲ್ ಫೇರ್ ಅಸೋಸಿಯೇಷನ್ ನಿಂದ ನ.೨೩ ರಂದು ಬೆಳಗ್ಗೆ ೧೧ ಕ್ಕೆ ಜಿಲ್ಲಾಧಿಕಾರಿಗಳ ಮೂಲಕ  ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ.ಸೌಹಾರ್ದವಾಗಿರುವ ಸಮಾಜದಲ್ಲಿನ ಧರ್ಮಗಳ  ಮೇಲೆ ಅಡ್ಡಗೋಡೆ ಕಟ್ಟಬಾರದು.ರಾಜ್ಯದ ಅನೇಕಕಡೆ ಹಲ್ಲೆ,ಸುಳ್ಳು ದೂರು ದಾಖಲು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಫಾದರ್ ಡಾ.ಅಂಥೋನಿ ಪೀಟರ್ ಮಾತನಾಡಿ ಕ್ರೈಸ್ತ ಸಮುದಾಯದವರು ಒಟ್ಟಾಗಿ ಜೀವನ ನಡೆಸುವವರು .ಭಾರತ ದೇಶದ ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ.ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರೂ ಒಂದೇ ಎನ್ನುವ ಭಾವನೆ ಇದೆ ಅದಕ್ಕಾಗಿಯೇ ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎನ್ನುವುದು ಆದರೆ ಇಂತಹ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಕಾಯ್ದೆ ಮೂಲಕ ಧರ್ಮಗಳ ಒಡೆಯುವ ಕೆಲಸ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಕ್ರೈಸ್ತರದುಕೇವಲ ಶೇ ೧.೮ ರಷ್ಟು ಮಾತ್ರ ಜನಸಂಖ್ಯೆ ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಕುಮಾರ್,ಮೋಸಸ್ ಅಮನ್ನಾ,ಅಲೆಕ್ಸಾಂಡರ್ ಇದ್ದರು.