ಮತಾಂತರ ಕಾಯ್ದೆ ರದ್ದು ಖಂಡಿಸಿ ಪ್ರತಿಭಟನೆ

ಚಾಮರಾಜನಗರ, ಜೂ. 18:- ಮತಾಂತರ ನಿμÉೀಧ ಕಾಯ್ದೆ ರದ್ದುಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಬಳಿ ಜಮಾಯಿಸಿದ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು. ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿಶ್ವ ಹಿಂದು ಪರಿಷತ್‍ನ ಕಾರ್ಯದರ್ಶಿ ಮಧು ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮತಾಂತರ ನಿμÉೀಧ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಮೂಲ ಹಿಂದು ಧರ್ಮದ ಅಸ್ಮಿತೆಯನ್ನು ಹಾಳು ಮಾಡಲು ಹೊರಟಿದೆ. ಕಾಂಗ್ರೆಸ್ ಹಿಂದು ವಿರೋಧಿ ಸರ್ಕಾರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಮತಾಂತರ ನಿμÉೀಧ ಕಾಯ್ದೆ ಹಾಗೂ ಗೋಹತ್ಯೆ ನಿμÉೀಧ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಧರ್ಮ ಹಾಗೂ ಗೋವುಗಳ ರಕ್ಷಣೆಗೆ ಮುಂದಾಗಿತ್ತು ಎಂದರು.
ಆದರೆ, ಕಾಂಗ್ರೆಸ್ ಸರ್ಕಾರ ಈ ಕಾನೂನುಗಳನ್ನು ರದ್ದುಪಡಿಸುವ ಮೂಲಕ ಹಿಂದು ಧರ್ಮ ಹಾಗೂ ದೇಶವನ್ನು ಬಲಿ ಕೊಡಲು ಮುಂದಾಗಿದೆ. ಅಧಿಕಾರಕ್ಕೆ ಬಂದ 20 ದಿನಗಳಲ್ಲಿಯೇ ಸರ್ಕಾರದ ಕ್ರೂರ ನಡೆ ಪ್ರಾರಂಭವಾಗಿದೆ. ಇದೇ ರೀತಿ ಮುಂದುವರಿದರೆ ದೇಶ ಮತ್ತೊಮ್ಮೆ ಪರಕೀಯರ ಕೈಸೇರಬಹುದು. ಕೂಡಲೇ ಸರ್ಕಾರ ಕಾಯ್ದೆಯನ್ನು ರದ್ದುಪಡಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್‍ನ ವಿಭಾಗೀಯ ಕಾರ್ಯದರ್ಶಿ ರಾ.ಸತೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಜನರಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರಕ್ಕೆ ಬಂದಿದೆ. ದೇಶದ ಮೂಲ ಶಕ್ತಿ ಹಿಂದುತ್ವ, ಸಮಾಜ ಹಾಗೂ ದೇಶದ್ರೋಹಿ ಕೆಲಸ ಮಾಡುವವರಿಗೆ ಈ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಬಿಜೆಪಿ ಜಾರಿಗೆ ತಂದಿದ್ದ ಮತಾಂತರ ನಿμÉೀಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಅನ್ಯಧರ್ಮಿಯರು ಮತ ಹಾಕಿಲ್ಲ, ಹಿಂದೂಗಳು ಮತ ಹಾಕಿದ್ದಾರೆ. ಮತಾಂತರ ನಿμÉೀಧ ಕಾಯ್ದೆ ವಾಪಸ್ ಪಡೆದಿರುವುದು ಹಿಂದೂ ಸಮಾಜಕ್ಕೆ ಎಸಗಿದ ದ್ರೋಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಾಸುದೇವರಾವ್, ಸಹ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಗೋರಕ್ಷಾ ಪ್ರಮುಖ್ ಶಂಕರ, ನಗರ ಭಜರಂಗದಳ ಸಂಯೋಜಕ್ ರಮೇಶ್, ಹಿಂದೂ ಸಂಘಟನೆ ಮುಖಂಡರಾದ ಎಸ್. ಬಾಲಸುಬ್ರಹ್ಮಣ್ಯ, ಶಂಕರ್, ರಮೇಶ್ ನಾಯಕ, ನೂತನ್, ರವಿಕುಮಾರ್, ಪಾಂಡು, ರಾಜೇಶ್, ಮಹೇಶ್, ಸೋಮಣ್ಣ, ಮಣಿಕಂಠ, ಗುರುಮೂರ್ತಿ, ಮನು, ಅಭಿ, ಕೃಷ್ಣ, ವಿನೋದ್‍ರಾಜ್, ರಂಗಸ್ವಾಮಿ, ಸುಭಾμï, ಸಿದ್ದ, ಸಂತೋμï ಮೊದಲಾದವರು ಇದ್ದರು.