ಮತಹಾಕುವದು ನಮ್ಮೆಲ್ಲರ ಆದ್ಯ ಕರ್ತವ್ಯ : ಎಸ್ ಎಸ್ ಕಾದ್ರೊಳ್ಳಿ

ಗುರುಮಠಕಲ್:ಮಾ.16: ಮುಂಬರುವ ಚುನಾವಣೆಯ ದಿನಗಳಲ್ಲಿ ಯೋಗ್ಯ ಮತ್ತು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತಹ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಮಾನ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ ಯವರು ಹೇಳಿದರು. ತಾಲೂಕು ಸ್ವೀಪ್ ಹಾಗೂ ಗ್ರಾಮ ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ಚುನಾವಣೆ ಮತದಾರರ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ತಾಲೂಕಿನ ಸಮೀಪದಲ್ಲಿರುವ ಚಂಡ್ರಿಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮತ್ತು ವಿಶ್ವಗುರು ಬಸವೇಶ್ವರ ವೃತ್ತದಲ್ಲಿರುವ ಕಟ್ಟೆಬಸವಣ್ಣನ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮತಚಲಾಯಿಸುವ ಅರ್ಹ ಅಭ್ಯರ್ಥಿಗಳು ಉತ್ತಮ ನಾಯಕನನ್ನು ಆರಿಸುವಂತಹ ಜವಾಬ್ದಾರಿ ಮುಖ್ಯವಾಗಿ ಯುವ ಶಕ್ತಿಯ ಮೇಲಿದೆ. ನಮ್ಮ ಮನೆಯ ಸುತ್ತ ಮುತ್ತಲು ಇರಬಹುದು ನಮ್ಮ ಸಂಬಂಧಿಕರು ಇರಬಹುದು ಅವರಿಗೆ ಅರಿವು ಮೂಡಿಸುವ ತಿಳಿಸಿಹೇಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಇಲ್ಲಿ ನೆರೆದಿರುವ ಸಾರ್ವಜನಿಕರಲ್ಲಿ ತಿಳಿಸುವದೆನಂದರೆ ಮುಖ್ಯವಾಗಿ ಮತದಾನದ ದಿನದಂದು ನಮ್ಮ ಹಕ್ಕು ಒಳ್ಳೆಯ ನಾಯಕನನ್ನು ನೋಡಿ ಮತಹಾಕ ಬೇಕು. ಗ್ರಾಮಗಳಲ್ಲಿ ಮನೆಯ ಅಕ್ಕ ಪಕ್ಕದವರು ಅಂಗವಿಕಲತೆ ಯಿಂದ ಕೂಡಿರಬಹುದು ಮತ್ತು ನಡೆಯಲು ಬಾರದೆ ವಯೋವೃದ್ಧರು ಇರಬಹುದು ಅಂತವರನ್ನು ಗುರುತಿಸಿ ಚುನಾವಣೆಯ ಸಿಬ್ಬಂದಿ ಯವರು ಮನೆಮನೆಗೆ ತೆರಳಿ ಮತದಾನವನ್ನು ಪಡೆಯುವಂತಹ ಕೆಲಸವನ್ನು ಈ ವರ್ಷದಿಂದ ದೇಶದಲ್ಲಿಯೇ ಪ್ರಥಮ ಬಾರಿ ನಮ್ಮ ರಾಜ್ಯದಿಂದ ಚುನಾವಣೆ ಆಯೋಗದಿಂದ ಆಗುತ್ತಿದೆ. ಆ ನಿಟ್ಟಿನಲ್ಲಿ ನಾವು ಕೂಡ ಅಂತವರನ್ನು ಗುರುತಿಸಿ ಮತದಾನವನ್ನು ಮಾಡಿಸುವಂತಹ ಕೆಲಸ ನಮ್ಮ ನಿಮ್ಮೆಲ್ಲರ ಮೇಲಿದೆ. ಮತಹಾಕುವದು ನಮ್ಮೆಲ್ಲರ ಹಕ್ಕು ಅಂತವರನ್ನು ಗುರುತಿಸಿ ಮತಗಟ್ಟೆಗೆ ಹೋಗಿ ಮತಚಲಾಯಿಸ ಬೇಕು ಅನ್ನುವ ಅರಿವು ನಾವು ಜನರಲ್ಲಿ ಮೂಡಿಸಬೇಕಾಗಿದೆ ಯಾರು ಈ ಮತಚಲಾಯಿಸುವ ಹಕ್ಕು ನಿಂದ ವಂಚಿತರಾಗ ಬಾರದು ಅನ್ನುವ ಉದ್ದೇಶವೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಇನ್ನೂಂದು ಮುಖ್ಯವಾದ ವಿಷಯವೇನೆಂದರೆ ಮನೆಮನೆಗೆ ಮತಯಾಚನೆ ಮಾಡುತ್ತಿದ್ದಾರೆ ಎಂದು ಎಲ್ಲಾರು ಮನೆಯಲ್ಲಿ ಕೂಡಬಾರದು ನಡೆಯಲು ನಿಶ್ಶಕ್ತಿ ಇದ್ದವರಿಗೆ ಮಾತ್ರ ಈ ಯೋಜನೆಯನ್ನು ತಂದಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮತಹಾಕುವ ಹಕ್ಕುಬಹಳ ಮುಖ್ಯವಾದದ್ದು ಆದಕಾರಣ ಯಾರು ವಂಚಿತರಾಗದೆ ಎಲ್ಲಾರು ಮತವನ್ನು ಹಾಕುವುದರ ಜೊತೆಗೆ ಆಶೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ನಾಯಕನನ್ನು ನಮ್ಮ ಅಮೂಲ್ಯ ಮತವನ್ನು ಕೊಡುವುದರ ಜೊತೆಗೆ ಉತ್ತಮ ನಾಯಕನನ್ನು ಆರಿಸುವ ಕೆಲಸ ಬಹಾಳ ಮುಖ್ಯವಾದದ್ದು ಎಂದು ನೆರೆದಿರುವ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ. ಗ್ರಾಮ ಪಂಚಾಯಿತಿ ಸಿಬ್ಬಂದಿ ಯವರು. ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳು ಕೆ. ಮೊಗುಲಪ್ಪ. ಸಹಶಿಕ್ಷಕರು. ಅಂಗನವಾಡಿ ಕಾರ್ಯಕರ್ತೆಯರು. ಅಂಗನವಾಡಿ ಸಹಾಯಕಿಯರು. ಆಶಾ ಕಾರ್ಯಕರ್ತೆಯರು. ಶಾಲಾ ಮಕ್ಕಳು. ಸಾರ್ವಜನಿಕರು ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.