ಮತವಿಭಜನೆಯಿಂದ ಪಕ್ಷಕ್ಕೆ ಸೋಲು


ಸಂಜೆವಾಣಿ ವಾರ್ತೆ
ಸಂಡೂರು:ಮೇ: 16; ಭಾರತೀಯ ಜನತಾ ಪಕ್ಷದಲ್ಲಿ ತತ್ವ ಸಿದ್ದಾಂತದ ಅಡಿಯಲ್ಲಿ ಈ ಹಿಂದೆ ಸೋತ ಅಭ್ಯರ್ಥಿ ರಾಘವೇಂದ್ರ ಅವರ ಪತ್ನಿಗೆ ಪಕ್ಷ ಮತ್ತೋಮ್ಮೆ ಸ್ಪರ್ಧಿಸಲು ಅವಕಾಶವನ್ನು ಕಾರ್ತಿಕ್ ಘೋರ್ಪಡೆ ಹಾಗೂ ಪಕ್ಷ ನಿರ್ಧರಿಸಿತು. ಅದರಂತೆ ತಾಲೂಕಿನಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದೇವೆ, ಅದರೆ ಹಣಬಲ, ಮತ ವಿಭಜನೆ ಫಲವಾಗಿ ಇಂದು ಪಕ್ಷ ಸೋಲನ್ನು ಕಂಡಿರಬಹುದು, ಅದರೆ ಮುಂಬರುವ ದಿನಗಳಲ್ಲಿ ಮತ್ತೇ ಗೆದ್ದೆ ಗೆಲ್ಲುತ್ತೇನೆ, ನಮ್ಮ ನಾಯಕರು ಸದಾ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಟಿ. ಪಂಪಾಪತಿ ತಿಳಿಸಿದರು.
ಅವರು ಪಟ್ಟಣದ ಕಾರ್ತಿಕ ಘೋರ್ಪಡೆಯವರ ಮನೆಯ ಅವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರಿಗೆ ಸ್ವಲ್ಪ ಹಿನ್ನೆ ಅನಿಸಿರಬಹುದು, ಅದರೆ ವಿರೋಧಿ ಅಲೆ ಸಹಜವಾಗಿ ಕೆಲಸ ಮಾಡಿದರೆ, ಪಕ್ಷದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಬೀಳುವ ಎಲ್ಲಾ ಕಾರ್ಯಗಳನ್ನು ನಿಭಾಯಿಸುತ್ತೇವೆ, ಅಲ್ಲದೆ ನರೇಂದ್ರ ಮೋದಿಯವರ ದೇಶಕಾಯುವ ಕೆಲಸಕ್ಕೆ ಪ್ರತಿಯೊಬ್ಬ ಕಾರ್ಯಕರ್ತ ತನ್ನ ಶ್ರಮ ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಎಲ್ಲಾ ಸದಸ್ಯರುಗಳು, ಮುಖಂಡರು ಉಪಸ್ಥಿತರಿದ್ದರು.