ಮತವನ್ನು ಹಾಕಿ ದೇಶದ ಹಿತವನ್ನು ಕಾಪಾಡಿ


ಧಾರವಾಡ,ಏ.9: ಪ್ರತಿಯೊಬ್ಬ ಅರ್ಹ ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು, ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಸ್ವರೂಪ ಟಿ.ಕೆ. ಹೇಳಿದರು.
ಮತದಾರರ ಜಾಗೃತಿ ಮತ್ತು ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಗರದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ -2023 ಮತದಾರರ ಜಾಗೃತಿಗಾಗಿ ವಿಕಲಚೇತನರ ತ್ರಿಚಕ್ರ ವಾಹನ ರ್ಯಾಲಿಗೆ ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಾದ್ಯಂತ 100ಕ್ಕೆ 100ರ?À್ಟು ಮತದಾರರು ಮತದಾನ ಮಾಡಬೇಕು. ವಿಕಲಚೇತನರಿಗೆ ಮತ್ತು 80 ವ?ರ್À ಮೇಲ್ಪಟ್ಟ ಹಿರಿಯರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ. ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ್ತು ಅಕ್ಕ-ಪಕ್ಕದವರನ್ನು ಮನವೊಲಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಮತದಾನ ನಮ್ಮೆಲ್ಲರ ಹಕ್ಕು, ಮತದಾರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಲು ಏ.11 ರ ವರೆಗೆ ಕಾಲಾವಕಾಶವಿದೆ ಎಂದು ಹೇಳಿದರು.
ಎಲ್ಲ ಮತದಾರರು ಮೇ 10ಕ್ಕೆ ಮತದಾನ ಮಾಡುವುದನ್ನು ನೆನಪಿಟ್ಟುಕೊಳ್ಳಿ. ನ್ಯಾಯ ಸಮ್ಮತ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ, ಮತವನ್ನು ಹಾಕಿ ದೇಶದ ಹಿತವನ್ನು ಕಾಪಾಡಿ. ನಂತರ ವಾಹನ ರ್ಯಾಲಿಯು ಆರ್. ಎನ್. ಶೆಟ್ಟಿ ಕ್ರೀಡಾಂಗಣದಿಂದ ಜುಬ್ಲಿ ಸರ್ಕಲ್ ಮೂಲಕ ಕಲಾಭವನಕ್ಕೆ ಸಂಚರಿಸಲಾಯಿತು. ರ್ಯಾಲಿಯಲ್ಲಿ ವಿಕಲಚೇತನರು ತಮ್ಮ ವಾಹನಗಳೊಂದಿಗೆ ಭಾಗವಹಿಸಿ ಸಾರ್ವಜನಿಕರಿಗೆ ಮತದಾನದ ಮಹತ್ವವನ್ನು ತಿಳಿಸಿದರು.
ಜಿಲ್ಲಾ ಚುನಾವಣಾ ಐಕಾನ್ ಜ್ಯೋತಿ ಸಣ್ಣಕ್ಕಿ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಬಸವಲಿಂಗ ಮೂಗನೂರಮಠ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯ ನಿರ್ದೇಶಕ ಕುಮಾರ ಬೆಕ್ಕೇರಿ, ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಬಿ.ಆರ್. ಪಾತ್ರೋಟ್ ಮತ್ತು ಇನ್ನಿತರ ಅಧಿಕಾರಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.