ಮತನೀಡಲು ವಕೀಲರಲ್ಲಿ ಪ್ರತಾಪ್ ರೆಡ್ಡಿ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30: ತಮಗೆ ಮತ ನೀಡುವಂತೆ ಈಶಾನ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ವಕೀಲರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಒಂಬತ್ತು ತಿಂಗಳಿಂದಲೇ ಈ ಚುನಾವಣೆಗೆ ಸಿದ್ದತೆ ಮಾಡಿಕೊಂಡು ಪ್ರಚಾರ ನಡೆಸಿದ್ದ ಪ್ರತಾಪ್ ರೆಡ್ಡಿ ಅವರು ಜೂನ್ 3 ರಂದು ನಡೆಯುವ ಚುನಾವಣೆಯ ಮತದಾನಕ್ಕೂ ಮುನ್ನ ಪದವಿ ಪಡೆದ ಎಲ್ಲ ವರ್ಗದ ಅಂದರೆ ಶಿಕ್ಷಕ, ವಕೀಲ, ವೈದ್ಯ, ಇಂಜಿನೀಯರಿಂಗ್, ಅಕೌಂಟೆಂಟ್  ಮತ್ತಿತರೇ ಕ್ಷೇತ್ರಗಳ ಹಾಗು ನಿರುದ್ಯೋಗಿ ಪದವೀಧರ ಮತದಾರರನ್ನು ಅಂತಿಮವಾಗಿ ಭೇಟಿ ಮಾಡಿ ಮತಯಾಚಿಸುವ ಕಾರ್ಯ ನಡೆಸಿದ್ದಾರೆ.
ನಿನ್ನೆ ದಿನ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಬಳ್ಳಾರಿ ವಕೀಲರ ಸಂಘದ ಕಚೇರಿಗೆ ದಂಪತಿ ಸಮೇತ ತೆರಳಿದ ಪ್ರತಾಪ್ ರೆಡ್ಡಿ    ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಎರೇಗೌಡ, ಕಾರ್ಯದರ್ಶಿ ಬಿ.ರವೀಂದ್ರ ಕಲ್ಕಂಬ, ಖಜಾಂಚಿ ವಿರೇಶ ,ಜಂಟಿ ಕಾರ್ಯದರ್ಶಿ ತ್ರಿವೇಣಿ ಹಿರಿಯವಕೀಲರಾದ ಉಡೇದ ಬಸವರಾಜ್, ಪಟೇಲ್ ಸಿದ್ದಾರೆಡ್ಡಿ, ಜಾತಪ್ಪ,  ಬಿ‌ವಿ.ಬಸವರಾಜ್, ಎನ್, ಅಯ್ಯಪ್ಪಜನಾರ್ದನ, ಶರಣಬಸವ,  ರಾಘವೇಂದ್ರ, ದತ್ತಾತ್ರೇಯರೆಡ್ಡಿ, ಸಂಗನಕಲ್ಲು  ಹನುಮಂತರೆಡ್ಡಿ ಇನ್ನಿತರರು ಇದ್ದರು.