ಮತದಾರ ಹೆಸರು ಪರಿಶೀಲನೆಗೆ ಸೂಚನೆ

ರಾಯಚೂರು, ಜ.೨೦- ಒಂದಕ್ಕಿಂತ ಹೆಚ್ಚಿನ ವಾರ್ಡ್ ಗಳಲ್ಲಿ ಮತದಾರರ ಹೆಸರು ಸೇರ್ಪಡೆ ಆಗಿದ್ದಲ್ಲಿ ಅದನ್ನು ರದ್ದು ಪಡಿಸಿ ಒಬ್ಬ ಮತದಾರನ ಹೆಸರು ಒಂದೇ ಮತದಾರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಹಾಯ ಆಯುಕ್ತ ರಜಿನಿಕಾಂತ್ ಅವರು ಸಂಬಂಧಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ೫೪ ಮತದಾರ ಪರಿಷ್ಕರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ವಿವಿಧ ವಾರ್ಡ್ಗಳಲ್ಲಿ ಹೆಚ್ಚುವರಿ ಮತದಾರರ ಹೆಸರು ಸೇರ್ಪಡೆಯಾಗಿದೆ. ಬಿಎಲ್‌ಓಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ಮಾಡಬೇಕು. ನಗರದ ೫೪ ವಾರ್ಡ್ ನಲ್ಲಿ ಖಾಜಾ ಹುಸೇನ್ ಎಂಬ ವ್ಯಕ್ತಿಯ ಮತದಾರರ ಗುರುತಿನ ಚೀಟಿ ಹಲವು ಕಡೆ ಪತ್ತೆಯಾಗಿದ್ದು ಪರಿಶೀಲನೆ ಮಾಡಿ ರದ್ದು ಪಡಿಸುವಂತೆ ಸೂಚನೆ ನೀಡಿದರು.ನಗರದ ಎಲ್ಲ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ಮತದಾನದಿಂದ ವಂಚಿತವಾಗದಂತೆ ನೋಡಿಕೊಳ್ಳಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಬಿಎಲ್ ಒ ಗಳಿಗೆ ನೀಡಿದರು. ಮತದಾರರು ತಪ್ಪದೇ ತಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳಲು ಮತದಾರಿಗೆ ಸಲಹೆ ನೀಡಬೇಕು ಎಂದರು.
ಮತದಾರ ಪಟ್ಟಿ ಪರಿಷ್ಕರಣೆಗಾಗಿ ಚುನಾವಣೆ ಆಯೋಗದ ನಿರ್ದೇಶನದಂತೆ ಕಡ್ಡಾಯವಾಗಿ ಮತದಾರ ಸೇರ್ಪಡೆ ತಿದ್ದುಪಡಿ ಹಾಗೂ ಬದಲಾವಣೆ ಬಗ್ಗೆ ಮನೆ ಮನೆಗೆ ಭೇಟಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು ಆಯಾ ಮತಗಟ್ಟೆಯ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೇ ಕಾರ್ಯವನ್ನು ಕೈಗೊಳ್ಳಲಿದ್ದು, ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ಇತರೆ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.ಮತದಾರ ಸೇರ್ಪಡೆಯಲ್ಲಿ ಕಾರ್ಯನಿರ್ವಹಿಸಿರುವ
ಜವಾಬ್ದಾರಿಯುತವಾಗಿ ಬಿಎಲ್ ಓ ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜಶೇಖರ ಬಿ ಬಿಎಲ್ ಓ, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.