ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸಿದ ನಿತೀನ್

ಅಫಜಲಪುರ:ಜೂ.4: ಮೇ 10 ರಂದು ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಷ್ಟ್ರೀಯ ಪಕ್ಷಗಳಿಗೆ ಪೈಪೆÇೀಟಿ ನೀಡಿದ್ದಲ್ಲದೆ ಗೆಲುವಿಗೆ ಸಮೀಪಿಸಿ ಕೆಲವೇ ಮತಗಳ ಅಂತರದಿಂದ ಸೋತಿರಬಹುದು ಆದರೆ 52 ಸಾವಿರ ಮತಗಳನ್ನು ಪಡೆಯುವ ಮೂಲಕ ಮತದಾರರ ಹೃದಯ ಗೆದ್ದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ನಿತೀನ್ ಗುತ್ತೇದಾರ್ ತಿಳಿಸಿದರು.

ಪಟ್ಟಣದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕೃತಜ್ಞತಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸಾಕಷ್ಟು ಹಿರಿಯರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ನನಗೆ ಸಂಪೂರ್ಣವಾಗಿ ಬೆಂಬಲಿಸಿದರು.

ಆದರೆ ಅಲ್ಪ ಮತಗಳ ಅಂತರದಿಂದ ಹಿನ್ನಡೆಯಾಗಿದೆ ಅಷ್ಟೇ. ಆದರೂ 2 ರಾಷ್ಟ್ರೀಯ ಪಕ್ಷಗಳ ತೀವ್ರ ಪೈಪೆÇೀಟಿ ಮಧ್ಯೆ ಇಡೀ ರಾಜ್ಯವೇ ಗಮನ ಸೆಳೆಯುವಂತೆ ಪಕ್ಷೇತರ ಅಭ್ಯರ್ಥಿಯಾದ ನನಗೆ ಅಭೂತಪೂರ್ವವಾಗಿ ಬೆಂಬಲಿಸಿ ಮತ ಹಾಕಿದ ಮತದಾರರಿಗೆ ನಾನು ಯಾವತ್ತೂ ಚಿರಋಣಿ. ಹೀಗಾಗಿ ನಮ್ಮ ಕಾರ್ಯಕರ್ತರು ಹಾಗೂ ಹಿತೈಷಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದಿನಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ನಿರತರಾಗೋಣ ಎಂದು ಕರೆ ನೀಡಿದರು ಹಾಗೂ
ಶೀಘ್ರದಲ್ಲೇ ಜಿಪಂ ಮತ್ತು ತಾಪಂ ಚುನಾವಣೆ ಇರುವುದರಿಂದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಯಾವ ರೀತಿ ಅನುಕೂಲವಾಗುವುದೋ ಆ ನಿಟ್ಟಿನಲ್ಲಿ ಯೋಜನೆ ರೂಪಿಸೋಣ ಎಂದು ತಿಳಿಸಿದರು.

ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂದು ನಾವೇನೂ ಶರಣಾಗುವುದಿಲ್ಲ. ಆಳುವ ಜನಪ್ರತಿನಿಧಿಗಳ ಭ್ರಷ್ಟಾಚಾರ ಕಂಡು ಬಂದಲ್ಲಿ
ನಮ್ಮ ಹೋರಾಟ ನಿರಂತರ ಮುಂದುವರಿಯುವುದಾಗಿ ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ, ನಮಗೇನು ರಾಷ್ಟ್ರೀಯ ಪಕ್ಷ ಇಲ್ಲ, ದೊಡ್ಡ ದೊಡ್ಡ ನಾಯಕರಿಲ್ಲ, ಸ್ಟಾರ್ ಪ್ರಚಾರಕರಿಲ್ಲ. ಆದರೂ ನಿತೀನ್ ಗುತ್ತೇದಾರ್ ಅವರಿಗೆ ಮತದಾರರು ಬೆಂಬಲಿಸಿದ್ದಾರೆ. ಹೀಗಾಗಿ ಜನರ ಮಧ್ಯೆ ಇದ್ದುಕೊಂಡು ಎಂದಿನಂತೆ ಸಮಾಜಮುಖಿ ಕೆಲಸ ಮಾಡುವುದಾಗಿ ತಿಳಿಸಿದರು.

ದಲಿತ ಸಮುದಾಯದ ಮುಖಂಡ
ನಾಗೇಶ ಕೊಳ್ಳಿ ಮಾತನಾಡಿ ಜಿಲ್ಲೆಯಲ್ಲಿ ಶಾಸಕ ಎಂ.ವೈ.ಪಾಟೀಲ್ ಗೆಲುವಿಗಿಂತ ನಿತೀನ್ ಗುತ್ತೇದಾರ್ ಸೋಲಿನ ಚರ್ಚೆಯೆ ನಡೆದಿದೆ. ಕೆಲವೇ ದಿನ ಪ್ರಚಾರ ಮಾಡಿದರೂ ಸಹ ಜನ ನಮಗೆ ಬೆಂಬಲಿಸಿ ಆಶೀರ್ವಾದ ಮಾಡಿದ್ದಾರೆ ಮತ್ತು ಕೆಲವೇ ಮತಗಳ ಅಂತರದಿಂದ ನಮಗೆ ಸೋಲಾಗಿದೆ. ಆದರೂ ನಾವೆಲ್ಲರೂ ಮುಂದಿನ ದಿನಗಳಲ್ಲಿ ಮತ್ತೆ ನಿತೀನ್ ಗುತ್ತೇದಾರ್ ಅವರ ಕೈ ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸತೀಶ್ ಗುತ್ತೇದಾರ್, ತುಕಾರಾಮಗೌಡ ಪಾಟೀಲ್, ಮಹಾದೇವ ಗುತ್ತೇದಾರ್, ರಮೇಶ ಬಾಕೆ, ವಿಶ್ವನಾಥ ರೇವೂರ, ಜ್ಯೋತಿ ಪ್ರಕಾಶ್ ಪಾಟೀಲ್, ಗುರು ಸಾಲಿಮಠ, ರಾಜಶೇಖರ್ ಜಿಡ್ಡಗಿ, ವಿಶ್ವನಾಥ ಕಾರ್ನಾಡ್, ರಮೇಶ ನೀಲಗಾರ, ಶಿವಪುತ್ರಪ್ಪ ಕೆರೂರ, ಶಂಕರ ಮ್ಯಾಕೇರಿ, ಸಿದ್ದಯ್ಯ ಸ್ವಾಮಿ ಹಿರೇಮಠ, ಸಿದ್ದು ರಾಣೆ, ಬಸವರಾಜ್ ಚಾಂದಕವಟೆ, ಭಗವಂತ ವಗ್ಗೆ, ಪಾಷಾ ಮಣ್ಣೂರ, ಬೀರಣ್ಣ ಕನಕ ಟೇಲರ್, ಬಸವರಾಜ ನಿಂಬಾಳ, ಚಿದಾನಂದ ಮಠ, ಧಾನು ಪತಾಟೆ, ಸುನೀಲ್ ಶೆಟ್ಟಿ, ಬಸವರಾಜ ವಾಳಿ, ಮಹಾಂತೇಶ ಉಜನಿ, ಸಿದ್ದು ಮ್ಯಾಕೇರಿ, ರಾಜು ಸಂಗೋಗಿ ಅನೇಕರು ಉಪಸ್ಥಿತರಿದ್ದರು.