ಮತದಾರ ಪಟ್ಟಿ ಪರಿಷ್ಕರಣೆ ಜಾಗೃತಿಗೆ ಕಾಲ್ನಡಿಗೆ ಜಾಥಾ

ತಿ.ನರಸೀಪುರ:ನ.10:- ಚುನಾವಣಾ ಆಯೋಗವು 2023ರ ಹೊಸ ಮತದಾರ ಕರಡು ಪ್ರತಿಯನ್ನು ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕು ಆಡಳಿತದ ವತಿಯಿಂದ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ್ ಮೈಸೂರು ಮತ್ತು ತಾಲೂಕು ಪಂಚಾಯಿತಿ ನರಸೀಪುರ ಇವರ ಸಹಯೋಗದಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರು,ಶಾಲಾ ಮಕ್ಕಳು,ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು.ಜಾಥಾ ಕಾರ್ಯಕ್ರಮ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾರ ಪಟ್ಟಿ ಪರಿಷ್ಕರಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಸಿ.ಜಿ. ಗೀತಾ,ಚುನಾವಣೆ ಆಯೋಗವು ಹೊಸ ಮತದಾರ ಪಟ್ಟಿಯ ಕರಡು ಪ್ರತಿಯನ್ನು ಬಿಡುಗಡೆಗೊಳಿಸಿದ್ದು,ಈ ಮತದಾರ ಪಟ್ಟಿ ಪರಿಷ್ಕರಣೆಗೆ 5ನೇ ಜನವರಿ 2023 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಿಗದಿತ ಆವಧಿಯೊಳಗೆ ಮತದಾರ ಪಟ್ಟಿಯಲ್ಲಿ ಆಗಬೇಕಾದ ತಿದ್ದುಪಡಿಗೆ ಅರ್ಜಿ ಸಲ್ಲಿಸಕೊಳ್ಳಲು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ ಮಾತನಾಡಿ, 18ವರ್ಷಗಳು ತುಂಬಿದ ಪ್ರತಿಯೊಬ್ಬರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.ಮತದಾರ ಪಟ್ಟಿಯಲ್ಲಿರುವ ಸ್ವವಿವರಗಳನ್ನು ಪರೀಕ್ಷಿಸಿ ವಿವರ ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.ಅಲ್ಲದೆ ಅಂತರ್ಜಾಲದಲ್ಲಿ ‘ಗಿoeಣeಡಿ heಟಠಿಟiಟಿe’ಆಪ್ ನಲ್ಲೂ ತಮ್ಮ ಸ್ವವಿವರಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚುನಾವಣಾ ಶಿರಸ್ತೆದಾರ್ ಜೆ.ಕೆ.ಪ್ರಭುರಾಜ್, ಪ್ರಭಾರ ಸಿಡಿಪಿಓ ಭವ್ಯಶ್ರೀ, ಸಿ.ಆರ್.ಪಿ.ನವೀನ, ನಂದಿನಿ, ರೂಪ ಇತತರು ಹಾಜರಿದ್ದರು.