ಮತದಾರ ಜಾಗೃತಿ ಅಭಿಯಾನ


ಸಂಜೆ  ವಾಣಿ ವಾರ್ತೆ
ಕೊಟ್ಟೂರು, ಏ.10: ಪಟ್ಟಣ ಪಂಚಾಯಿತಿ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡ ಮತದಾರ ಜಾಗೃತಿ ಕಾರ್ಯಕ್ರಮದಲ್ಲಿ ಹಸಿರು ಹೊನಲು ತಂಡ ಹಾಗೂ ಆರೋಗ್ಯ ಇಲಾಖೆಯವರು ಮತದಾರರು  ಕಡ್ಡಾಯವಾಗಿ ಮತ  ಚಲಾಯಿಸುವಂತೆ  ಬೀದಿ ನಾಟಕ ಮೂಲಕ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತ್ತೆ ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೆ  ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಮತ ಚಲಾಯಿಸುತ್ತೇವೆ ಎಂದು  ಪ್ರತಿಜ್ಞೆ ಮಾಡುವುದರ ಮುಖಂತರ ಜಾಗೃತಿ ಮೂಡಿಸಿದರು
ಈ ಸಂದರ್ಭದಲ್ಲಿ  ಶಿಕ್ಷಕರಾದ  ಸೋಮಶೇಖರ್ ಮಾತನಾಡಿ ಇಡೀ ಪ್ರಪಂಚದಲ್ಲೇ ಅತ್ಯಂತ ಬೃಹತ್ ಹಾಗೂ ಮಹತ್ವವಾದ ಸಂವಿಧಾನ ಎಂದರೆ ಅದು ನಮ್ಮ ಭಾರತ ಸಂವಿಧಾನವಾಗಿದೆ  ಇದರ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಹಾಗೂ ದೇಶಕ್ಕೆ  ಮತ್ತು ರಾಜ್ಯಕ್ಕೆ  ಉತ್ತಮ ನಾಯಕನನ್ನು ಪಡೆಯುವ ಸಲುವಾಗಿ ಎಲ್ಲ ಮತದಾರರು ನಿಷ್ಠೆಯಿಂದ  ಕಡ್ಡಾಯವಾಗಿ ಮತವನ್ನು ಮಾಡುವುದರ ಮೂಲಕ ದೇಶದ ಪ್ರಜಾಪ್ರಭುತ್ವದ ಮಹತ್ವವನ್ನು ಇಡೀ ಪ್ರಪಂಚಕ್ಕೆ ತಿಳಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು,   ಶಿಕ್ಷಕ ಶಶಿಧರ್,  ಹಸಿರು ಹೊನಲು ತಂಡದ ಅಧ್ಯಕ್ಷರಾದ ಗುರುರಾಜ್,   ಸದಸ್ಯರಾದ.ಅಜಯ್, ನಾಗರಾಜ್ ಬಂಜಾರ, ಕೃಷ್ಣ ಸಿಂಗ್ , ದರ್ಶನ್, ಶ್ರೀಕಾಂತ್ ಮುಂತಾದವರು ಇದ್ದರು